ಢಾಕಾ: ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಈ ಪಂದ್ಯದಲ್ಲಿ ಅವರು 70 ಎಸೆತಗಳಿಂದ 73 ರನ್ ಗಳಿಸಿ ತಂಡ ಹೀನಾಯ ಮೊತ್ತಕ್ಕೆ ಆಲೌಟ್ ಆಗುವುದನ್ನು ತಪ್ಪಿಸಿದರು. ಸಾಮಾನ್ಯವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ರಾಹುಲ್ ಮಧ‍್ಯಮ ಕ್ರಮಾಂಕದಲ್ಲಿ ಆಡಲಿಳಿದಿದ್ದರು.
ಈ ಪಂದ್ಯದಲ್ಲಿ ಅವರು ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮೊದಲು ರವಿಶಾಸ್ತ್ರಿ-ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿಯೂ ರಾಹುಲ್ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟಿಗನಾಗಿ ಕರ್ತವ್ಯ ನಿರ್ವಹಿಸಿ ಮಧ‍್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಆಗೆಲ್ಲಾ ಅವರು ಉತ್ತಮ ರನ್ ಗಳಿಸಿದ್ದರು. ಇದಾದ ಬಳಿಕ ರಿಷಬ್ ಪಂತ್ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಆರಂಭಿಸಿದ ಮೇಲೆ ರಾಹುಲ್ ಕೆಲವೊಮ್ಮೆ ಬೆಂಚ್ ಕಾಯಿಸಿದ್ದೂ ಇದೆ. ಈಗ ಮತ್ತೆ ಅವರಿಗೆ ವಿಕೆಟ್ ಕೀಪರ್ ಮತ್ತು ಮಧ‍್ಯಮ ಕ್ರಮಾಂಕದ ಬ್ಯಾಟಿಗನಾಗಿ ಜವಾಬ್ಧಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಅವರು ಮತ್ತೆ ಕ್ಲಿಕ್ ಆಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಆ ಒಂದು ಕ್ಯಾಚ್ ಡ್ರಾಪ್ ನಿಂದ ಸಿಕ್ಕ ಗೌರವವನ್ನೂ ನೆಲಕ್ಕೆ ಹಾಕಿದರು ಎಂಬುದು ವಿಪರ್ಯಾಸ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!