Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ತಂದೆಯಿಂದ ಅರ್ಜುನ್ ತೆಂಡುಲ್ಕರ್ ಗೆ ಕೋಚಿಂಗ್: ತಂದೆಯ ಹಾದಿಯಲ್ಲಿ ಮಗ!

ಯುವರಾಜ್ ಸಿಂಗ್ ತಂದೆಯಿಂದ ಅರ್ಜುನ್ ತೆಂಡುಲ್ಕರ್ ಗೆ ಕೋಚಿಂಗ್: ತಂದೆಯ ಹಾದಿಯಲ್ಲಿ ಮಗ!
ಬೆಂಗಳೂರು , ಗುರುವಾರ, 15 ಡಿಸೆಂಬರ್ 2022 (09:20 IST)
Photo Courtesy: Twitter
ಪಣಜಿ: ತಂದೆಯಂತೇ ಮಗ ಎನ್ನುವುದನ್ನು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ನಿರೂಪಿಸಿದ್ದಾರೆ.
 

ಗೋವಾ ಪರ ಚೊಚ್ಚಲ ರಣಜಿ ಪಂದ್ಯ ಆಡುತ್ತಿರುವ ಅರ್ಜುನ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ತಂದೆಯ ಸಾಧನೆ ಸರಿಗಟ್ಟಿದ್ದಾರೆ. ಸಚಿನ್ ಕೂಡಾ ಇದೇ ರೀತಿ ಮೊದಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದರು. 1988 ರ ಡಿಸೆಂಬರ್ 11 ರಂದು ಸಚಿನ್ ಮೊದಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ಇದೀಗ ಅರ್ಜುನ್ 2022 ರಲ್ಲಿ ತಂದೆಯ ಸಾಧನೆ ಮಾಡಿದ್ದಾರೆ. ಅರ್ಜುನ್ ಈ ವರ್ಷ ಮುಂಬೈನಲ್ಲಿ ಅವಕಾಶ ಸಿಗದ ಕಾರಣ ಗೋವಾ ತಂಡಕ್ಕೆ ವಲಸೆ ಬಂದಿದ್ದರು. ಇದೀಗ ಮೊದಲ ಪಂದ್ಯ ಆಡುವ ಅವಕಾಶ ಪಡೆದಿದ್ದು, ಅದನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.

ಅಷ್ಟಕ್ಕೂ ಅರ್ಜುನ್ ಗೆ ಕೋಚಿಂಗ್ ನೀಡಿದವರು ಯಾರು ಗೊತ್ತಾ? ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್. ಗೋವಾ ತಂಡಕ್ಕೆ ಅರ್ಜುನ್ ಸೇರ್ಪಡೆಯಾದ ಬಳಿಕ ಸೆಪ್ಟೆಂಬರ್ ನಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದರು. ಆಗ ಕೋಚ್‍ ಯೋಗರಾಜ್ ಸಿಂಗ್, ಅರ್ಜುನ್ ಗೆ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ನೀನು ಮುಂದಿನ 15 ದಿನಗಳ ಕಾಲ ಸಚಿನ್ ತೆಂಡುಲ್ಕರ್ ಮಗ ಎಂಬುದನ್ನು ಮರೆತು ಕೇವಲ ಆಟಗಾರನಾಗಿ ಅಭ್ಯಾಸ ಮಾಡಬೇಕು ಎಂದಿದ್ದರಂತೆ. ಅದರಂತೆ ಚಾಚೂ ತಪ್ಪದೇ ಪಾಲಿಸಿದ ಅರ್ಜುನ್ ಗೆ ಇಂದು ಯಶಸ್ಸು ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಎದುರು ವೀರೋಚಿತ ಸೋಲುಂಡ ಭಾರತ ಮಹಿಳಾ ಕ್ರಿಕೆಟಿಗರು