Webdunia - Bharat's app for daily news and videos

Install App

ಕರುಣ್ ನಾಯರ್ ಜೊತೆ ಕನ್ನಡ, ಸಾಯಿ ಜೊತೆ ತಮಿಳು ಇದು ಕೆಎಲ್ ರಾಹುಲ್ ಅಂದ್ರೆ

Krishnaveni K
ಮಂಗಳವಾರ, 24 ಜೂನ್ 2025 (09:54 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಜೊತೆ ತಮಿಳಿನಲ್ಲಿ, ರಿಷಭ್ ಜೊತೆ ಹಿಂದಿಯಲ್ಲಿ ಮತ್ತು ಕರುಣ್ ನಾಯರ್ ಜೊತೆ ಕನ್ನಡದಲ್ಲಿ ಮಾತನಾಡಿ ಕೆಎಲ್ ರಾಹುಲ್ ತಾವು ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ವೈಯಕ್ತಿಕವಾಗಿಯೂ ವಿಭಿನ್ನ ಆಟಗಾರ ಎಂದು ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ರಾಹುಲ್ ಎರಡೂ ಇನಿಂಗ್ಸ್ ನಲ್ಲಿ ಕ್ಲಾಸ್ ಆಟಗಾರನಂತೆ ಆಡಿದ್ದಾರೆ. ಅವರ ಹೊಡೆತಗಳು ಅಷ್ಟು ಅದ್ಭುತವಾಗಿತ್ತು. ಎರಡನೇ ಇನಿಂಗ್ಸ್ ನಲ್ಲಂತೂ ಶತಕ ದಾಖಲಿಸಿದರು.

ವಿಶೇಷವಾಗಿ ಎರಡನೇ ಇನಿಂಗ್ಸ್ ನಲ್ಲಿ ರಾಹುಲ್ ಸಾಯಿ ಸುದರ್ಶನ್, ರಿಷಭ್ ಪಂತ್ ಮತ್ತು ಕರುಣ್ ನಾಯರ್ ಜೊತೆ ಉಪಯುಕ್ತ ಜೊತೆಯಾಟವಾಡಿದರು. ಜೊತೆಗಾರನ ಜೊತೆ ಪಿಚ್ ಬಗ್ಗೆ ಆಟಗಾರರು ಪರಸ್ಪರ ಚರ್ಚಿಸುವುದು ಸಹಜ. ಅದೇ ರೀತಿ ಸಾಯಿ ಸುದರ್ಶನ್ ಜೊತೆ ರಾಹುಲ್ ತಮಿಳಿನಲ್ಲಿ ಮಾತನಾಡುವ ವಿಡಿಯೋ ಮೊನ್ನೆ ವೈರಲ್ ಆಗಿತ್ತು. ನಿನ್ನೆ ರಿಷಭ್ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಬಳಿಕ ತಮ್ಮ ಗೆಳೆಯ ಕನ್ನಡಿಗ ಕರುಣ್ ನಾಯರ್ ಜೊತೆ ಕನ್ನಡದಲ್ಲೇ ಮಾತನಾಡುತ್ತಿದ್ದರು.

ಅವರ ಈ ಬಹುಭಾಷೆಯ ಪ್ರತಿಭೆಯನ್ನು ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಕೂಡಾ ಕೊಂಡಾಡಿದ್ದಾರೆ. ಕೆಎಲ್ ರಾಹುಲ್ ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ವೈಯಕ್ತಿಕವಾಗಿಯೂ ವೈವಿಧ್ಯಮಯ ಆಟಗಾರ ಎಂದು ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಆಂಗ್ಲರ ವಿರುದ್ಧ ಶತಕ ಬಾರಿಸಿದ ಕನ್ನಡಿಗ ಕೆಎಲ್‌ ರಾಹುಲ್‌

ಮಕ್ಕಳನ್ನು ಯಾಕೆ ಕ್ಯಾಮರಾದಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೊಟ್ಟ ಅನುಷ್ಕಾ ಶರ್ಮಾ

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ

ENG vs Ind: ಧೋನಿ ದಾಖಲೆ ಮುರಿದು ಖುಷಿಯಲ್ಲಿದ್ದ ರಿಷಭ್ ಪಂತ್‌ ಬಿಗ್‌ ಶಾಕ್‌

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

ಮುಂದಿನ ಸುದ್ದಿ
Show comments