Select Your Language

Notifications

webdunia
webdunia
webdunia
webdunia

ಟೀಕೆಗಳಿಂದ ಬೇಸತ್ತ ಕೆಎಲ್ ರಾಹುಲ್ ಮೊದಲ ಟೆಸ್ಟ್ ಮುಗಿದ ತಕ್ಷಣವೇ ಮಾಡಿದ್ದೇನು ಗೊತ್ತಾ?

ಟೀಕೆಗಳಿಂದ ಬೇಸತ್ತ ಕೆಎಲ್ ರಾಹುಲ್ ಮೊದಲ ಟೆಸ್ಟ್ ಮುಗಿದ ತಕ್ಷಣವೇ ಮಾಡಿದ್ದೇನು ಗೊತ್ತಾ?
ಅಡಿಲೇಡ್ , ಮಂಗಳವಾರ, 11 ಡಿಸೆಂಬರ್ 2018 (09:43 IST)
ಅಡಿಲೇಡ್: ಫಾರ್ಮ್ ನಲ್ಲಿಲ್ಲದ ಆಟಗಾರರ ಮೇಲೆ ಆಳಿಗೊಬ್ಬರಂತೆ ಕಲ್ಲೆಸೆಯುವುದು ಹೊಸತಲ್ಲ. ಇದೀಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೂ ಅದೇ ಅನುಭವವಾಗಿದೆ.


ಸದ್ಯ ಕಳಪೆ ಫಾರ್ಮ್ ನಲ್ಲಿದ್ದರೂ ತಂಡದಲ್ಲಿ ಅವಕಾಶ ಪಡೆಯುತ್ತಿರುವ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗರು, ತಜ್ಞರು, ಅಭಿಮಾನಿಗಳು ಅಷ್ಟೇ ಏಕೆ, ತಂಡದ ಬ್ಯಾಟಿಂಗ್ ಕೋಚ್ ಕೂಡಾ ರಾಹುಲ್ ಬ್ಯಾಟಿಂಗ್ ವೈಫಲ್ಯವನ್ನು ಟೀಕಿಸುತ್ತಿದ್ದಾರೆ. ಹೀಗಾಗಿ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಮುಂದೆ ಇಂತಹ ತಪ್ಪಾಗದಂತೆ ನೋಡಿಕೊಳ್ಳಲು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಒಂದೆಡೆ ಭಾರತ ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದರೆ ಇತ್ತ ರಾಹುಲ್ ಗೆಲುವನ್ನು ತಲೆಗೆ ತೆಗೆದುಕೊಳ್ಳದೇ ಸೀದಾ ಮತ್ತೆ ಪ್ಯಾಡ್ ಕಟ್ಟಿಕೊಂಡು ಮುಂದಿನ ಟೆಸ್ಟ್ ಪಂದ್ಯಕ್ಕೆ ತಯಾರಾಗಲು ಪ್ರಾಕ್ಟೀಸ್ ಗೆ ತೆರಳಿದ್ದಾರೆ. ಮುಂದಿನ ಪಂದ್ಯದಲ್ಲೂ ಪೃಥ್ವಿ ಶಾ ಆಡದೇ ಇರುವುದರಿಂದ ರಾಹುಲ್ ಗೆ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ ಸುಮ್ಮನೇ ಅವಕಾಶ ಪಡೆದೆ ಎಂದು ಟೀಕಾಕಾರರಿಂದ ಹೇಳಿಸಿಕೊಳ್ಳುವ ಬದಲು ತಂಡಕ್ಕೆ ತನ್ನಿಂದ ಕೊಡುಗೆ ನೀಡಲು ಇದೀಗ ರಾಹುಲ್ ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಹಿಡಿದ ಕ್ಯಾಚ್ ಈಗ ವಿವಾದದಲ್ಲಿ