ನವದೆಹಲಿ: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಹೇಳಿದ ಕ್ರಿಕೆಟಿಗ ಗೌತಮ್ ಗಂಭೀರ್ ಧೋನಿ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
2012 ಆಸ್ಟ್ರೇಲಿಯಾ ಸರಣಿಯಲ್ಲಿ ಧೋನಿ ಕೈಗೊಂಡಿದ್ದ ನಿರ್ಧಾರದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಟೀಕಿಸಿದ್ದಾರೆ. ಆಗ ತಂಡದಲ್ಲಿ ತಾವು ಸೇರಿದಂತೆ ಸೆಹ್ವಾಗ್, ಸಚಿನ್ ಸೇರಿ ಮೂವರು ಆರಂಭಿಕರಿದ್ದರೂ 2015 ರ ವಿಶ್ವಕಪ್ ದೃಷ್ಟಿಯಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡುವುದಾಗಿ ಧೋನಿ ಹೇಳಿದ್ದರು. ಇದು ನಿಜಕ್ಕೂ ನಮಗೆ ಆಘಾತಕಾರಿಯಾಗಿತ್ತು ಎಂದು ಗಂಭೀರ್ ಧೋನಿ ನಾಯಕತ್ವವನ್ನು ಟೀಕಿಸಿದ್ದಾರೆ.
‘ನಾನು ಇದುವರೆಗೆ ಅಂತಹ ಯೋಜನೆಯನ್ನು ಕಂಡು ಕೇಳಿರಲಿಲ್ಲ. 2015 ವಿಶ್ವಕಪ್ ಗೆ ಎರಡು ವರ್ಷಗಳ ಮೊದಲೇ ನಿಮ್ಮನ್ನು ತಂಡದಿಂದ ಕೈ ಬಿಡಲಾಗುವುದು ಎಂದು ಹೇಗೆ ನಿರ್ಧರಿಸಲು ಸಾಧ್ಯ? ನನ್ನ ಪ್ರಕಾರ ರನ್ ಗಳಿಸುತ್ತಿದ್ದರೆ, ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ. ಇದು ನಮಗೆ ಮೂವರಿಗೂ ಆಘಾತಕಾರಿಯಾಗಿತ್ತು’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ