ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

Krishnaveni K
ಗುರುವಾರ, 4 ಡಿಸೆಂಬರ್ 2025 (11:53 IST)
Photo Credit: X
ರಾಯ್ಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಪ್ರಸಿದ್ಧ ಕೃಷ್ಣಗೆ ಕೆಎಲ್ ರಾಹುಲ್ ಕನ್ನಡದಲ್ಲೇ ಹೇಳಿದ್ದು ಹಾಕು ಎಂದು ಬೈದ ವಿಡಿಯೋ ಈಗ ವೈರಲ್ ಆಗಿದೆ.

ನಿನ್ನೆಯ ಪಂದ್ಯವನ್ನು 358 ರನ್ ಗಳಿಸಿಯೂ ಟೀಂ ಇಂಡಿಯಾ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಸೋತಿದೆ. ಅದರಲ್ಲೂ ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಬಲು ದುಬಾರಿಯಾದರು. ಒಟ್ಟು 8.2 ಓವರ್ ಗಳಲ್ಲಿ ಅವರು 85 ರನ್ ನೀಡಿದ್ದರು.

ಇನ್ನು ಪಂದ್ಯದ ನಡುವೆ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ನಡುವೆ ಮಾತಿನ ವಿಡಿಯೋವೊಂದು ಈಗ ವೈರಲ್ ಆಗಿದೆ. ಅದರಲ್ಲೂ ವಿಪರೀತ ರನ್ ನೀಡುತ್ತಿದ್ದ ಪ್ರಸಿದ್ಧ ಕೃಷ್ಣ ಮೇಲೆ ರಾಹುಲ್ ಸಿಟ್ಟಿಗೆದ್ದ ಘಟನೆ ನಡೆದಿದೆ.

‘ಪ್ರಸಿದ್ಧ ನಿನ್ ತಲೆ ಓಡಿಸ್ಬೇಡ. ಹೇಳಿದ್ದು ಹಾಕು. ಹೇಳಿದ್ದೀನಿ ಏನು ಹಾಕಬೇಕು ಅಂತ’ ಎಂದು ರಾಹುಲ್ ಹೇಳುತ್ತಾರೆ. ಅದಕ್ಕೆ ಪ್ರಸಿದ್ಧ್ ‘ತಲೆಗೆ ಹಾಕಲಾ?’ ಎಂದು ಕೇಳುತ್ತಾರೆ. ಆಗ ರಾಹುಲ್ ಸಿಟ್ಟಾಗಿ ‘ತಲೆಗೆಲ್ಲಾ ಬೇಡ ಈಗ’ ಎನ್ನುತ್ತಾರೆ. ರಾಹುಲ್ ಹೇಳಿದ ಮೇಲೂ ಪ್ರಸಿದ್ಧ್ ಅದೇ ರೀತಿ ಬೌಲಿಂಗ್ ಮಾಡಿದಾಗ ಸಿಟ್ಟಾಗುವ ರಾಹುಲ್ ‘ಪ್ರಸಿದ್ಧ ಹೇಳಿದ್ದೀನಿ ತಲೆಗೆಲ್ಲಾ ಹಾಕಬೇಡ ಅಂತ. ಆದ್ರೂ ಹಾಕ್ತೀಯಲ್ಲಾ ಮಗಾ’ ಎಂದು ಆಕ್ರೋಶ ಹೊರಹಾಕುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ರೋಹಿತ್ ಶರ್ಮಾ ಕಣ್ಣು ರೆಪ್ಪೆ ಬಿದ್ದಿದ್ದು ನೋಡಿ ರಿಷಭ್ ಪಂತ್ ಏನ್ಮಾಡಿದ್ರು: ಫನ್ನಿ ವಿಡಿಯೋ

ಟೆಸ್ಟ್ ಆಡುವ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಏಕದಿನ ತಂಡದಲ್ಲಿ ಯಾಕಿದ್ದಾರೆ

IND- SA 2nd ODI: ವಿರಾಟ್‌, ಋತುರಾಜ್‌ ಶತಕ ವ್ಯರ್ಥ; ರನ್‌ ಮಳೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ,

ಶತಕದ ಬೆನ್ನಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಬಡ್ತಿ: ಅಗ್ರಸ್ಥಾನದಲ್ಲಿ ರೋಹಿತ್‌ ಶರ್ಮಾ

ಮುಂದಿನ ಸುದ್ದಿ
Show comments