Publish Date: Sun, 02 Dec 2018 (09:50 IST)
Updated Date: Sun, 02 Dec 2018 (09:52 IST)
ಸಿಡ್ನಿ: ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ಟೀಂ ಇಂಡಿಯಾ ಕೋಚ್ ಸಿಟ್ಟಿಗೆದ್ದ ಬೆನ್ನಲ್ಲೇ ಇದೀಗ ಅಭ್ಯಾಸ ಪಂದ್ಯದಲ್ಲಿ ರಾಹುಲ್ ತಪ್ಪು ಸರಿಪಡಿಸುವ ಪ್ರಯತ್ನ ನಡೆಸಿದ್ದಾರೆ.
ರಾಹುಲ್ ತಾಂತ್ರಿಕತೆ ಸರಿಯಾಗಿಯೇ ಇದೆ. ಆದರೆ ಅವರು ಕೆಟ್ಟ ಹೊಡೆತಗಳಿಗೆ ಕೈ ಹಾಕಿ, ಪ್ರತೀ ಬಾರಿಯೂ ಹೊಸ ಹೊಸ ರೀತಿಯಲ್ಲಿ ಔಟಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಹುಲ್ ಮೇಲೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕಿಡಿ ಕಾರಿದ್ದರು.
ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ರಾಹುಲ್ ಕೊಂಚ ಸಮಾಧಾನಕರ ಇನಿಂಗ್ಸ್ ಆಡಿದ್ದು, ಅರ್ಧಶತಕ ಗಳಿಸಲು ಯಶಸ್ವಿಯಾಗಿದ್ದಾರೆ. ಒಟ್ಟು 98 ಎಸೆತ ಎದುರಿಸಿದ ರಾಹುಲ್ 62 ರನ್ ಸಿಡಿಸಿದರು. ಈ ಮೂಲಕ ಪೃಥ್ವಿ ಶಾ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆ ತಮ್ಮ ಆರಂಭಿಕ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ