Publish Date: Sat, 18 Dec 2021 (08:40 IST)
Updated Date: Sat, 18 Dec 2021 (09:06 IST)
ಮುಂಬೈ: ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇದಕ್ಕೂ ಮೊದಲು ಹೊಸದಾಗಿ ಸೇರ್ಪಡೆಯಾಗಿರುವ ಎರಡು ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಮೂವರು ಆಟಗಾರರನ್ನು ಖರೀದಿಸಬಹುದಾಗಿದೆ.
ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಅಹಮ್ಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿ ನಾಯಕನ ಹುಡುಕಾಟದಲ್ಲಿದೆ. ಮೂಲಗಳ ಪ್ರಕಾರ ಕೆಎಲ್ ರಾಹುಲ್ ಲಕ್ನೋ ತಂಡಕ್ಕೆ ಮತ್ತು ಡೆಲ್ಲಿಯಿಂದ ಹೊರಬಂದಿರುವ ಶ್ರೇಯಸ್ ಐಯರ್ ಅಹಮ್ಮದಾಬಾದ್ ತಂಡಕ್ಕೆ ನಾಯಕರಾಗಲಿದ್ದಾರೆ ಎಂಬ ಸುದ್ದಿಯಿದೆ.
ಆಟಗಾರರ ಪಟ್ಟಿ ರಿಲೀಸ್ ಮಾಡುವ ಮುನ್ನವೇ ಕೆಎಲ್ ರಾಹುಲ್ ಮೇಲೆ ಲಕ್ನೋ ತಂಡ ದೃಷ್ಟಿ ನೆಟ್ಟಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು. ಈಗ ಅಹಮ್ಮದಾಬಾದ್ ತಂಡವೂ ಪ್ರಬಲ ನಾಯಕನ ಹುಡುಕಾಟದಲ್ಲಿದ್ದು, ಶ್ರೇಯಸ್ ಜೊತೆ ಮಾತುಕತೆಯಲ್ಲಿದೆ ಎನ್ನಲಾಗಿದೆ.