Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್: ಕೆಎಲ್ ರಾಹುಲ್ ಫ್ಲಾಪ್ ಸ್ಟಾರ್!

ಏಷ್ಯಾ ಕಪ್: ಕೆಎಲ್ ರಾಹುಲ್ ಫ್ಲಾಪ್ ಸ್ಟಾರ್!
ದುಬೈ , ಸೋಮವಾರ, 29 ಆಗಸ್ಟ್ 2022 (08:30 IST)
ದುಬೈ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಬಂದ ಬಾಲ್ ಗೇ ಡಕ್ ಔಟ್ ಆಗಿ ನಿರ್ಗಮಿಸಿದ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ನೆಟ್ಟಿಗರಿಂದ ತೀವ್ರ ಟ್ರೋಲ್ ಗೊಳಗಾಗಿದ್ದಾರೆ.

ಪ್ರಮುಖ ಸಂದರ್ಭದಲ್ಲೇ ಕೈ ಕೊಡುವ ಕೆಎಲ್ ರಾಹುಲ್ ಬಿಗ್ ಫ್ಲಾಪ್ ಸ್ಟಾರ್ ಎಂದು ನೆಟ್ಟಿಗರು ಜರೆದಿದ್ದಾರೆ. ಚೋಕರ್ ಎಂಬುದು ಕಲೆ ಆದರೆ ರಾಹುಲ್ ಅದರ ಮಾಸ್ಟರ್ ಎಂದು ಟ್ರೋಲ್ ಮಾಡಿದ್ದಾರೆ.

ವಿವಿಧ ಮೆಮೆಗಳ ಮೂಲಕ ರಾಹುಲ್ ರನ್ನು ಟ್ರೋಲ್ ಮಾಡಲಾಗಿದೆ. ರಾಹುಲ್ ಬೇಗನೇ ಔಟಾಗಿದ್ದರಿಂದ ಭಾರತ ಆರಂಭದಲ್ಲೇ ಸಂಕಷ್ಟಕ್ಕೀಡಾಯಿತು. ಆದರೆ ಕೊನೆಯಲ್ಲಿ ರವೀಂದ್ರ ಜಡೇಜಾ-ಹಾರ್ದಿಕ್ ಪಾಂಡ್ಯ ಸಿಡಿದಿದ್ದರಿಂದ ಭಾರತಕ್ಕೆ ಗೆಲುವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಪಾಕ್ ಬೌಲರ್ ಗಳಿಗೆ ಔಟ್ ಆಫ್ ಸಿಲಬಸ್ ಆಗಿ ಬಂದ ಪಾಂಡ್ಯ-ಜಡೇಜಾ