Publish Date: Sun, 28 Aug 2022 (19:10 IST)
Updated Date: Sun, 28 Aug 2022 (19:11 IST)
ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ಟೀಂ ಇಂಡಿಯಾಗೆ ಕೋಚ್ ರಾಹುಲ್ ದ್ರಾವಿಡ್ ಕಮ್ ಬ್ಯಾಕ್ ಮಾಡಿರುವುದು ಹೊಸ ಶಕ್ತಿ ನೀಡಿದೆ.
ಕೊರೋನಾದಿಂದ ಚೇತರಿಸಿಕೊಂಡಿರುವ ದ್ರಾವಿಡ್ ನಿನ್ನೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಇದುವರೆಗೆ ಅವರಿಗೆ ಆಟಗಾರರ ಜೊತೆ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಇಂದು ಟಾಸ್ ಗೆ ಮುನ್ನ ಎಲ್ಲಾ ಆಟಗಾರರನ್ನು ಒಟ್ಟುಗೂಡಿಸಿ ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ.