Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯನ್ನರ ಶಾರ್ಟ್ ಬಾಲ್ ಗೆ ಬೆದರಿದ ಪಾಕ್

ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯನ್ನರ ಶಾರ್ಟ್ ಬಾಲ್ ಗೆ ಬೆದರಿದ ಪಾಕ್
ದುಬೈ , ಭಾನುವಾರ, 28 ಆಗಸ್ಟ್ 2022 (21:30 IST)
ದುಬೈ: ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು.. ಭಾರತದ ಬೌಲರ್ ಗಳನ್ನು ಈ ಹಿಂದಿನಂತೆ ಬೆವರಿಳಿಸಬೇಕು ಎಂದು ತಯಾರಾಗಿ ಬಂದಿದ್ದ ಪಾಕ್ ಆಟಗಾರರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿತ್ತು.

ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್  19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾದ ವೇಗಿಗಳ ಶಾರ್ಟ್ ಬಾಲ್ ಗೆ ಬೆದರಿದ ಪಾಕ್ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಹಾರ್ದಿಕ್ ಪಾಂಡ್ಯ ನಾಲ್ಕು ಓವರ್ ಗಳ ಕೋಟಾದಲ್ಲಿ ಮೂರು ವಿಕೆಟ್ ಕಿತ್ತು ಪರಿಣಾಮಕಾರಿಯಾದರು. ಆ ಮೂರೂ ವಿಕೆಟ್ ಶಾರ್ಟ್ ಬಾಲ್ ನಿಂದ ಬಂತು ಎನ್ನುವುದು ವಿಶೇಷ. ಮೊದಲಿಗೆ ಅಪಾಯಕಾರಿ ಬಾಬರ್ ಅಜಮ್ ರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್ ಗಟ್ಟಿದರು. ಇದಾದ ಬಳಿಕ ಮೊಹಮ್ಮದ್ ರಿಜ್ವಾನ್ 43 ರನ್ ಗಳಿಸಿದರು. ಆದರೆ ಇನ್ನೇನು ಗೇರ್ ಬದಲಾಯಿಸಬೇಕೆನ್ನುವಷ್ಟರಲ್ಲಿ  ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭುವನೇಶ್ವರ್ ಕುಮಾರ್ 4, ಅರ್ಷ್ ದೀಪ್ ಸಿಂಗ್ 2 ಮತ್ತು ಆವೇಶ್ ಖಾನ್ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದೀಗ ಭಾರತ ಗೆಲ್ಲಲು ರನ್ 148 ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಮೈದಾನದಲ್ಲೇ ದ್ರಾವಿಡ್ ಕ್ಲಾಸ್