Webdunia - Bharat's app for daily news and videos

Install App

ಕೆಎಲ್ ರಾಹುಲ್ ಲಂಡನ್ ಗೆ: ಐಪಿಎಲ್ ಗೂ ಡೌಟ್

Krishnaveni K
ಬುಧವಾರ, 28 ಫೆಬ್ರವರಿ 2024 (11:09 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಹೆಚ್ಚಿನ ಚಿಕಿತ್ಸೆಗೆ ಲಂಡನ್ ಗೆ ತೆರಳಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹೀಗಾದಲ್ಲಿ ಅವರು ಐಪಿಎಲ್ ನ ಮೊದಲಾರ್ಧದ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದ ರಾಹುಲ್ ಎರಡನೇ ಪಂದ್ಯದ ವೇಳೆಗೆ ತೊಡೆನೋವಿಗೊಳಗಾಗಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಬಳಿಕ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆಗಲೇ ಅಭ್ಯಾಸವನ್ನೂ ಆರಂಭಿಸಿದ್ದರು. ಹಾಗಿದ್ದರೂ ಅವರು 100% ಫಿಟ್ ಆಗಿರಲಿಲ್ಲ.

ಈಗಲೂ ರಾಹುಲ್ ನೋವಿನಿಂದ ಗುಣಮುಖರಾಗಿಲ್ಲ ಎನ್ನಲಾಗಿದೆ. ಹೀಗಾಗಿ ಅವರನ್ನು ಬಿಸಿಸಿಐ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ಕಳುಹಿಸಿದೆ. ಅವರ ಗಾಯದ ತೀವ್ರತೆ ನೋಡಿಕೊಂಡು ವೈದ್ಯರು ಚಿಕಿತ್ಸೆ ಕುರಿತು ನಿರ್ಧರಿಸಲಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್ ಪಂಧ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.

ಒಂದು ವೇಳೆ ಗಾಯ ಗಂಭೀರವಾಗಿದ್ದರೆ ರಾಹುಲ್ ಮಾರ್ಚ್ ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್ ನ ಮೊದಲಾರ್ಧದ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ಹೀಗಾದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೊಸ ನಾಯಕನನ್ನು ಕಂಡುಕೊ‍ಳ್ಳಬೇಕಿದೆ. ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಐದನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ  ಇದು ಔಪಚಾರಿಕ ಪಂದ್ಯವಾಗಿರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments