Publish Date: Mon, 27 Dec 2021 (08:40 IST)
Updated Date: Mon, 27 Dec 2021 (08:56 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ತಾಳ್ಮೆಯ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.
ಆರಂಭದಿಂದಲೂ ತಾಳ್ಮೆಯಿಂದಲೇ ಇನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ ಅವಕಾಶ ಸಿಕ್ಕಾಗ ಮನಮೋಹಕ ಹೊಡೆತಕ್ಕೆ ಕೈ ಹಾಕಿದರು. ನಿನ್ನೆಯ ದಿನದಂತ್ಯಕ್ಕೆ 122 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ 40 ರನ್ ಗಳಿಸಿರುವ ಅಜಿಂಕ್ಯಾ ರೆಹಾನೆ ತಕ್ಕ ಸಾಥ್ ನೀಡಿದ್ದಾರೆ.
ಚೇತೇಶ್ವರ ಪೂಜಾರ ಮತ್ತೆ ಶೂನ್ಯ ಸುತ್ತಿದರೆ, ಮಯಾಂಕ್ ಅಗರ್ವಾಲ್ 60 ರನ್, ವಿರಾಟ್ ಕೊಹ್ಲಿ 35 ರನ್ ಗಳಿಸಿ ಔಟಾದರು. ಆಫ್ರಿಕಾ ಪರ ಲುಂಗಿ ನಿಗಿಡಿ ಎಲ್ಲಾ 3 ವಿಕೆಟ್ ಕಬಳಿಸಿದರು.