ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Krishnaveni K
ಸೋಮವಾರ, 28 ಜುಲೈ 2025 (11:47 IST)
Photo Credit: X
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್  ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ ಅಡ್ಡವಾಗಿ ನಿಂತಿದ್ದ ಕೆಎಲ್ ರಾಹುಲ್ ಗೆ ನಿಮಗೆ ಸ್ವಿಂಗ್ ಆಡುವ ಯೋಗ್ಯತೆಯಿಲ್ಲ ಎಂದು ಹ್ಯಾರಿ ಬ್ರೂಕ್ ಕಿಚಾಯಿಸಿದ್ದಾರೆ. ಇದಕ್ಕೆ ಕೆಎಲ್ ರಾಹುಲ್ ಉತ್ತರ ಏನಿತ್ತು ನೋಡಿ.

ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಶೂನ್ಯಕ್ಕೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ಶುಭಮನ್ ಗಿಲ್-ಕೆಎಲ್ ರಾಹುಲ್ ಜೋಡಿ ತಂಡಕ್ಕೆ ಆಧಾರವಾದರು. ನಿಧಾನಗತಿಯ ಆಟದ ಮೂಲಕ ತಂಡವನ್ನು ಸುರಕ್ಷಿತ ಸ್ಥಾನಕ್ಕೆ ಕೊಂಡೊಯ್ದರು.


ಈ ಸರಣಿಯುದ್ದಕ್ಕೂ ಇಂಗ್ಲೆಂಡ್ ಗೆ ದೊಡ್ಡ ತಲೆನೋವು ಕೆಎಲ್ ರಾಹುಲ್.  ಪ್ರತೀ ಇನಿಂಗ್ಸ್ ನಲ್ಲೂ ಅವರು ದೊಡ್ಡ ಮೊತ್ತವನ್ನು ಪೇರಿಸುತ್ತಾರೆ. ಈ ಕಾರಣಕ್ಕೆ ಇಂಗ್ಲೆಂಡ್ ಆಟಗಾರರು ಅವರನ್ನೇ ಮಾತಿನ ಮೂಲಕ ಕೆಣಕುವ ಪ್ರಯತ್ನ ಮಾಡಿದ್ದಾರೆ.

ಇಂಗ್ಲೆಂಡ್ ಫೀಲ್ಡರ್ ಹ್ಯಾರಿ ಬ್ರೂಕ್ ಅಂತೂ ಕೆಎಲ್ ರಾಹುಲ್ ಗೆ ನಿಮಗೆ ಸ್ವಿಂಗ್ ಆಡುವ ಯೋಗ್ಯತೆಯಿಲ್ಲ. ಬೇಗ ಬೇಗ ಔಟಾಗಿ ಹೋಗಿ, ಪಂದ್ಯ ಮುಗಿಯಲಿ’ ಎಂದು ಕಿಚಾಯಿಸಿದ್ದಾರೆ. ಇದಕ್ಕೆ ರಾಹುಲ್ ಕೂಡಾ ತಕ್ಕ ಉತ್ತರ ಕೊಟ್ಟಿದ್ದಾರೆ. ‘ನಿಮ್ಮ ತಂದೆಗೆ ಹೋಗಿ ಹೀಗೆ ಹೇಳಬೇಡಿ. ನೀವು ಸ್ಪಿನ್ ಪಿಚ್ ನಲ್ಲಿ ಡ್ಯಾನ್ಸ್ ಮಾಡುವುದನ್ನು ನಾವು ನೋಡಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೂರನೇ ವಿಶ್ವಕಪ್‌ ಕಿರೀಟದ ಕನಸಿನಲ್ಲಿದ್ದ ಫ್ರಾನ್ಸ್‌ಗೆ ನಿರಾಸೆ: ಫೈನಲ್‌ಗೆ ಲಗ್ಗೆ ಹಾಕಿದ ಸ್ಪೇನ್‌

ಇಂವ ಹಿಂಗೇ ಗುರೂ.. ದಿನೇಶ್ ಕಾರ್ತಿಕ್ ಗೆ ಮೈದಾನದಲ್ಲೇ ಕಿಕ್ ಮಾಡಿದ ರೋಹಿತ್ ಶರ್ಮಾ Video

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

ಮುಂದಿನ ಸುದ್ದಿ
Show comments