ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಖಾತೆ ತೆರೆಯುವ ಮೊದಲೇ 2 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕೆಎಲ್ ರಾಹುಲ್-ಗಿಲ್ ಜೋಡಿ 188 ರನ್ ಗಳ ಜೊತೆಯಾಟವಾಗಿ ಅಡಿಪಾಯ ಹಾಕಿಕೊಟ್ಟರು. ಗಿಲ್ 103 ರನ್ ಗಳಿಸಿ ಔಟಾದರೆ ಕೆಎಲ್ ರಾಹುಲ್ 90 ಕ್ಕೆ ಔಟಾಗುವ ಮೂಲಕ ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದರು. ವಿಶೇಷವೆಂದರೆ ಗಿಲ್ 238 ಎಸೆತಗಳನ್ನು ಎದುರಿಸಿದ್ದರೆ ರಾಹುಲ್ 230 ಎಸೆತಗಳನ್ನು ಎದುರಿಸಿದ್ದರು. ಇದರಿಂದಾಗಿಯೇ ಭಾರತೀಯರಲ್ಲಿ ಆತ್ಮವಿಶ್ವಾಸ ಸಿಕ್ಕಿತು.
ಬಳಿಕ ವಾಷಿಂಗ್ಟನ್ ಸುಂದರ್-ಜಡೇಜಾ ಜೋಡಿಯ ಆಟ. 222 ರನ್ ಗಳಾಗಿದ್ದ ಭಾರತ 4 ನೇ ವಿಕೆಟ್ ಕಳೆದುಕೊಂಡಿತು. ಬಳಿಕ 425 ರನ್ ತನಕ ಈ ಜೋಡಿ ಔಟಾಗದೇ ಬ್ಯಾಟಿಂಗ್ ನಡೆಸಿದರು. ಜಡೇಜಾ ಮೊದಲನೆಯದವರಾಗಿ ಶತಕ (107) ಗಳಿಸಿದರೆ ಸುಂದರ್ ಎರಡನೆಯವರಾಗಿ ಶತಕ (101) ಪೂರೈಸಿದರು.
ಜಡೇಜಾ ಶತಕ ಪೂರೈಸಿದ ಬಳಿಕ ಬೌಲರ್ ಬ್ರೂಕ್ ಅಭಿನಂದಿಸಲು ಬಂದರೂ ವಾಷಿಂಗ್ಟನ್ ಸುಂದರ್ ಕ್ಯಾರೇ ಎನ್ನದೇ ಜಡೇಜಾ ಬಳಿ ಸಾಗಿದರು. ಭಾರತ ತಂಡದ ನಾಯಕ ಶುಭಮನ್ ಗಿಲ್ ಕೂಡಾ ಇಬ್ಬರೂ ಶತಕ ಪೂರೈಸಿದ ಬಳಿಕವಷ್ಟೇ ಡ್ರಾ ಮಾಡಿಕೊಳ್ಳಲು ಒಪ್ಪಿದರು.