Select Your Language

Notifications

webdunia
webdunia
webdunia
Saturday, 5 April 2025
webdunia

ಕೆಎಲ್ ರಾಹುಲ್, ಅಥಿಯಾ ಮೊದಲ ಮಗುವಿನ ರೂಮರ್ ಗಳಿಗೆ ಸಿಕ್ತು ಸ್ಪಷ್ಟನೆ

KL Rahul Athiya Shetty

Krishnaveni K

ಮುಂಬೈ , ಬುಧವಾರ, 3 ಏಪ್ರಿಲ್ 2024 (15:06 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು.

ಇದಕ್ಕೆ ಕಾರಣ ಸುನಿಲ್ ಶೆಟ್ಟಿ ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಮುಂದಿನ ಸೀಸನ್ ಗೆ ಬರುವಾಗ ನಾನು ಅಜ್ಜನಾಗಿ ಬರಲಿದ್ದೇನೆ ಎಂದಿದ್ದು. ಸುನಿಲ್ ಶೆಟ್ಟಿ ಹೇಳಿಕೆಯಿಂದ ಎಲ್ಲರೂ ರಾಹುಲ್ ಮತ್ತು ಅಥಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿರಬಹುದು ಎಂದು ಊಹಿಸಿದ್ದರು.

ಆದರೆ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಂಗ್ಲ ಮಾಧ‍್ಯಮವೊಂದರ ವರದಿ ಪ್ರಕಾರ ರಾಹುಲ್-ಅಥಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವುದು ಸುಳ್ಳು. ಸುನಿಲ್ ಶೆಟ್ಟಿ ತಮಾಷೆಯಾಗಿ ಅಂತಹದ್ದೊಂದು ಹೇಳಿಕೆ ನೀಡಿದ್ದರು. ಅದರ ಅರ್ಥ ರಾಹುಲ್-ಅಥಿಯಾ ಪೋಷಕರಾಗುತ್ತಿದ್ದಾರೆ ಎಂದಲ್ಲ.

ಕಳೆದ ವರ್ಷ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಥಿಯಾ ಬಾಲಿವುಡ್ ನಟಿ ಮತ್ತು ನಟ ಸುನಿಲ್ ಶೆಟ್ಟಿ ಪುತ್ರಿ. ರಾಹುಲ್ ತಂದೆಯಾಗುತ್ತಿದ್ದರೆ ಎಂಬ ಸುದ್ದಿ ವೈರಲ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ನೋ ಸ್ಪೀಡ್ ಸ್ಟಾರ್ ಮಯಾಂಕ್ ಗೆ ಶೀಘ್ರವೇ ಟೀಂ ಇಂಡಿಯಾ ಕರೆ ಪಕ್ಕಾ