ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅರ್ಷ್ ದೀಪ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿ ಖುಷಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಯಿತು. ಈ ಪಂದ್ಯದ ಗೆಲುವಿಗೆ ಕೆಎಲ್ ರಾಹುಲ್ ಬ್ಯಾಟಿಂಗ್ ಪ್ರಮುಖ ಕಾರಣವಾಯ್ತು.
ಇನ್ನು ಅರ್ಷ್ ದೀಪ್ ಸಿಂಗ್ ಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಗಲಿಲ್ಲ. ಆದರೆ ಈ ಗೆಲುವಿಗೆ ಪ್ರತಿಯೊಬ್ಬ ಆಟಗಾರನ ಕೊಡುಗೆಯೂ ಮುಖ್ಯವಾಗಿತ್ತು. ಗೆಲುವಿನ ಬಳಿಕ ಎಲ್ಲಾ ಕ್ರಿಕೆಟಿಗರೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದರು.
ಈ ವೇಳೆ ಕೆಎಲ್ ರಾಹುಲ್ ಆಡುವಾಗ ತಾವು ತೊಟ್ಟು ಕೊಂಡಿದ್ದ ಗ್ಲೌಸ್ ಗಳನ್ನು ಬಾಲ್ಕನಿಯಲ್ಲಿದ್ದ ಓರ್ವ ಅಭಿಮಾನಿಯತ್ತ ಎಸೆದಿದ್ದಾರೆ. ಇನ್ನು, ಅರ್ಷ್ ದೀಪ್ ಸಿಂಗ್ ತಮ್ಮ ಹೆಲ್ಮೆಟ್ ಗೆ ಸಹಿ ಹಾಕಿ ಪುಟಾಣಿ ಅಭಿಮಾನಿಯೊಬ್ಬರಿಗೆ ಕೈಯಾರೆ ನೀಡಿದ್ದಾರೆ.