Select Your Language

Notifications

webdunia
webdunia
webdunia
webdunia

ಕೊಹ್ಲಿಯದ್ದು ಎಂಥಾ ಸಂಸ್ಕಾರ: ಮೊಹಮ್ಮದ್ ಶಮಿ ತಾಯಿ ಜೊತೆ ಹೇಗೆ ನಡೆದುಕೊಂಡರು ವಿಡಿಯೋ ನೋಡಿ

Virat Kohli-Mohammed shami mother

Krishnaveni K

ದುಬೈ , ಸೋಮವಾರ, 10 ಮಾರ್ಚ್ 2025 (09:44 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದ ಮೇಲೆ ಮೊಹಮ್ಮದ್ ಶಮಿ ತಾಯಿ ಜೊತೆ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ನೆಟ್ಟಿಗರ ಮನಗೆದ್ದಿದೆ. ಕೊಹ್ಲಿಯದ್ದು ಎಂಥಾ ಸಂಸ್ಕಾರ ಎಂದು ಕೊಂಡಾಡಿದ್ದಾರೆ.

ಫೈನಲ್ ಪಂದ್ಯ ನೋಡಲು ಬಹುತೇಕ ಟೀಂ ಇಂಡಿಯಾ ಕ್ರಿಕೆಟಿಗರ ಕುಟುಂಬಸ್ಥರು ಬಂದಿದ್ದರು. ಇವರಲ್ಲಿ ಮೊಹಮ್ಮದ್ ಶಮಿ ಕುಟುಂಬದವರೂ ಸೇರಿದ್ದರು. ಶಮಿ ತಾಯಿ, ಸಹೋದರ ಮತ್ತು ಇತರರು ಮೈದಾನದಲ್ಲಿದ್ದರು.

ಪಂದ್ಯ ಮುಗಿದ ಬಳಿಕ ಎಲ್ಲಾ ಆಟಗಾರರ ಕುಟುಂಬದವರೂ ಮೈದಾನಕ್ಕೆ ಬಂದಿದ್ದರು. ಪ್ರಶಸ್ತಿ ಸಮಾರಂಭ ಮುಗಿದ ಬಳಿಕ ಕೊಹ್ಲಿಗೆ ಶಮಿ ತಮ್ಮ ತಾಯಿ ಮತ್ತು ಕುಟುಂಬದವರನ್ನು ಪರಿಚಯಿಸಿದ್ದಾರೆ.

ಈ ವೇಳೆ ಶಮಿ ತಾಯಿಯನ್ನು ನೋಡುತ್ತಲೇ ಕೊಹ್ಲಿ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಶಮಿ ಕುಟುಂಬದ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಕೊಹ್ಲಿಯ ವರ್ತನೆ ನೆಟ್ಟಿಗರ ಮನಗೆದ್ದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Champions Trophy: ರಾಹುಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಿದ ಕೊಹ್ಲಿ, ರೋಹಿತ್ (ವಿಡಿಯೋ)