Select Your Language

Notifications

webdunia
webdunia
webdunia
webdunia

ಪಂದ್ಯ ಮುಗಿದ ಬಳಿಕ ಕೆಎಲ್ ರಾಹುಲ್ ಗೆ ಎಷ್ಟು ಜನ ಮುತ್ತುಕೊಟ್ಟರೋ..ಗಂಭೀರ್ ಕೂಡಾ ಬಿಡಲಿಲ್ಲ: ವಿಡಿಯೋ

KL Rahul

Krishnaveni K

ದುಬೈ , ಸೋಮವಾರ, 10 ಮಾರ್ಚ್ 2025 (09:56 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಫೈನಲ್ ಗೆಲುವಿನ ಬಳಿಕ ಕೆಎಲ್ ರಾಹುಲ್ ಗೆ ಅದೆಷ್ಟು ಮುತ್ತು ಸಿಕ್ತೋ.. ಸಿಕ್ಕವರೆಲ್ಲಾ ಅಪ್ಪಿ ಮುದ್ದಾಡಿದವರೇ ವಿಡಿಯೋ ನೋಡಿ.

ಕೆಎಲ್ ರಾಹುಲ್ ತಾಳ್ಮೆಯ ಆಟವಾಡಿ ಕೊನೆಯವರೆಗೂ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಸೆಮಿಫೈನಲ್ ನಲ್ಲೂ ಅವರ ತಾಳ್ಮೆಯ ಆಟವೇ ತಂಡದ ಗೆಲುವಿಗೆ ಪ್ರಧಾನ ಕಾರಣ ಎನ್ನಬಹುದು.

ಈ ಪಂದ್ಯ ಮುಗಿದ ಬಳಿಕ ಕೆಎಲ್ ರಾಹುಲ್ ರನ್ನು ಎಲ್ಲಾ ಆಟಗಾರರೂ ಅಪ್ಪಿ ಮುದ್ದಾಡಿದ್ದಾರೆ. ಅದರಲ್ಲೂ ಸಾಮಾನ್ಯವಾಗಿ ಗಂಭೀರವಾಗಿಯೇ ಇರುವ ಗೌತಮ್ ಗಂಭೀರ್ ಕೂಡಾ ಮೈದಾನಕ್ಕಿಳಿದು ರಾಹುಲ್ ರನ್ನು ಬಾಚಿ ತಬ್ಬಿಕೊಂಡಿದ್ದಲ್ಲದೆ ಮುತ್ತು ಕೊಟ್ಟಿದ್ದಾರೆ.

ಅದಾದ ಬಳಿಕ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ಮುತ್ತು ಕೊಟ್ಟವರೇ. ಇದು ಅಲ್ಲಿಗೇ ನಿಲ್ಲಲಿಲ್ಲ. ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಪಕ್ಕದಲ್ಲಿ ನಿಂತಿದ್ದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕಲ್ ಕೂಡಾ ಹಣೆ ಮೇಲೆ ಮುತ್ತು ಕೊಟ್ಟೇ ಬಿಟ್ಟರು.


Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯದ್ದು ಎಂಥಾ ಸಂಸ್ಕಾರ: ಮೊಹಮ್ಮದ್ ಶಮಿ ತಾಯಿ ಜೊತೆ ಹೇಗೆ ನಡೆದುಕೊಂಡರು ವಿಡಿಯೋ ನೋಡಿ