ಅಹಮ್ಮದಾಬಾದ್: ಗುಜರಾತ್ ವಿರುದ್ಧ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 2 ರನ್ ಗಳ ಲೀಡ್ ಪಡೆದ ಕೇರಳ ಫೈನಲ್ ಗೇರಿ ಇತಿಹಾಸ ನಿರ್ಮಿಸಿದೆ. ಆ ನಾಟಕೀಯ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.
ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೇರಳ 2 ರನ್ ಗಳ ಮುನ್ನಡೆಯಿಂದಾಗಿ ಫೈನಲ್ ಪ್ರವೇಶಿಸಿದೆ. 74 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೇರಳ ರಣಜಿ ಫೈನಲ್ ಗೇರಿದೆ.
ಮೊದಲ ಇನಿಂಗ್ಸ್ ನಲ್ಲಿ ಕೇರಳ 457 ರನ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ 455 ರನ್ ಗಳಿಗೆ ಆಲೌಟ್ ಆಯಿತು. ಕೊನೆಯ ದಿನ ಎರಡನೇ ಇನಿಂಗ್ಸ್ ನಲ್ಲಿ ಕೇರಳ 2 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿತ್ತು. ಆದರೆ ಇಂದು ಕೊನೆಯ ದಿನವಾಗಿರುವುದರಿಂದ ಪಂದ್ಯ ಬಹುತೇಕ ಡ್ರಾದತ್ತ ಸಾಗುತ್ತಿದೆ. ಹೀಗಾಗಿ ಮೊದಲ ಇನಿಂಗ್ಸ್ ಮುನ್ನಡೆಯನ್ನು ಆಧರಿಸಿ ಫೈನಲಿಸ್ಟ್ ನಿರ್ಧಾರ ಮಾಡಲಾಗಿದೆ.
ಗುಜರಾತ್ ಕೊನೆಯ ವಿಕೆಟ್ ಪತನವೂ ನಾಟಕೀಯವಾಗಿತ್ತು. ಕೊನೆಯ ಬ್ಯಾಟಿಗ ಹೊಡೆದ ಚೆಂಡು ಸಿಲ್ಲಿ ಪಾಯಿಂಟ್ ನಲ್ಲಿದ್ದ ಕೇರಳ ಫೀಲ್ಡರ್ ಹೆಲ್ಮೆಟ್ ಗೆ ಬಿತ್ತು. ಇದು ಪುಟಿದು ಎತ್ತರಕ್ಕೆ ಚಿಮ್ಮಿದಾಗ ಅದನ್ನು ಕೇರಳ ನಾಯಕ ಸಚಿನ್ ಬೇಬಿ ಕ್ಯಾಚ್ ಪಡೆದರು. ಈ ಮೂಲಕ ಗುಜರಾತ್ 2 ರನ್ ಹಿನ್ನಡೆ ಅನುಭವಿಸಿತು. ಈ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.