Select Your Language

Notifications

webdunia
webdunia
webdunia
webdunia

Virat Kohli: ಡೆಲ್ಲಿ ರಣಜಿ ಮ್ಯಾಚ್ ನೋಡಲು ಪ್ರೇಕ್ಷಕರ ಕ್ಯೂ, ಎಲ್ಲವೂ ಕೊಹ್ಲಿ ಮ್ಯಾಜಿಕ್ (ವಿಡಿಯೋ)

Dehli Stadium

Krishnaveni K

ನವದೆಹಲಿ , ಗುರುವಾರ, 30 ಜನವರಿ 2025 (10:52 IST)
ನವದೆಹಲಿ: ದೆಹಲಿ ಮತ್ತು ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯ ನೋಡಲು ಇಂದ ಅರುಣ್ ಜೇಟ್ಲಿ ಮೈದಾನದ ಹೊರಗೆ ಜನರ ಕ್ಯೂ ನಿಂತಿತ್ತು. ಎಲ್ಲವೂ ವಿರಾಟ್ ಕೊಹ್ಲಿ ಮ್ಯಾಜಿಕ್ ಎಂದರೆ ತಪ್ಪಾಗಲಾರದು.

ದೆಹಲಿಯ ಪರವಾಗಿ ಕೊಹ್ಲಿ ರಣಜಿ ಮ್ಯಾಚ್ ಆಡಲಿದ್ದಾರೆ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳು ಪಂದ್ಯ ನೋಡಲು ಆಸಕ್ತಿ ವಹಿಸಿದ್ದರು. ಆದರೆ ಇಂದು ಪಂದ್ಯದ ದಿನ ನೋಡಿದರೆ ಮೈದಾನದ ಮುಂದೆ ಜನಸಾಗರವೇ ಸೇರಿತ್ತು.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು ಬೆಳ್ಳಂ ಬೆಳಿಗ್ಗೆಯೇ ಒಂದು ರಣಜಿ ಪಂದ್ಯ ನೋಡಲು ಜನಸಾಗರವೇ ಸೇರಿದೆ. ಒಂದು ಸಾಮಾನ್ಯ ರಣಜಿ ಪಂದ್ಯಕ್ಕೂ ಮೈದಾನ ಭರ್ತಿಯಾಗಿರುವುದು ವಿಶೇಷವಾಗಿದೆ. ಇದೆಲ್ಲವೂ ಕೊಹ್ಲಿ ಮ್ಯಾಜಿಕ್ ಎನ್ನಬಹುದು. 

ವಿರಾಟ್ ಕೊಹ್ಲಿ ಪಂದ್ಯವಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸುಮಾರು 10 ಸಾವಿರ ಮಂದಿ ಮೈದಾನಕ್ಕೆ ಬರಬಹುದು ಎಂದು ಅಧಿಕಾರಿಗಳು ಊಹಿಸಿದ್ದರು. ಆದರೆ ಈಗ ಊಹೆಗೂ ಮೀರಿ ಜನರ ಪ್ರತಿಕ್ರಿಯೆ ಕಂಡುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಲೈವ್: ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಬಂದವರಿಗೆ ನಿರಾಸೆ