Select Your Language

Notifications

webdunia
webdunia
webdunia
webdunia

ಕರ್ನಾಟಕ ವರ್ಸಸ್ ಹರ್ಯಾಣ ರಣಜಿ ಮ್ಯಾಚ್: ಕೆಎಲ್ ರಾಹುಲ್ ಗಳಿಸಿದ್ದೆಷ್ಟು

KL Rahul

Krishnaveni K

ಬೆಂಗಳೂರು , ಗುರುವಾರ, 30 ಜನವರಿ 2025 (16:29 IST)
Photo Credit: X
ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವರ್ಸಸ್ ಹರ್ಯಾಣ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಆಡುತ್ತಿರುವ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಗಳಿಸಿದ್ದೆಷ್ಟು ಗೊತ್ತಾ?

ಇಂದು ಟಾಸ್ ಗೆದ್ದ ಹರ್ಯಾಣ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ತವರಿನ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ. ಕರ್ನಾಟಕದ ಪರ ನಾಯಕ ಮಯಾಂಕ್ ಅಗರ್ವಾಲ್ 91 ರನ್ ಗಳಿಸಿ ಮಿಂಚಿದರು.

ರಾಜ್ಯದ ಪರ ಆಡುತ್ತಿರುವ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದರು. ಒಟ್ಟು 37 ಎಸೆತ ಎದುರಿಸಿದ ಅವರು ನಾಲ್ಕು ಬೌಂಡರಿ ಸಹಿತ ಕೇವಲ 26 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಇನ್ನೊಬ್ಬ ಟೀಂ ಇಂಡಿಯಾ ಆಟಗಾರ ದೇವದತ್ತ ಪಡಿಕ್ಕಲ್ 43 ರನ್ ಗಳಿಸಿ ನಾಯಕ ಮಯಾಂಕ್ ಗೆ ಉತ್ತಮ ಸಾಥ್ ನೀಡಿದರು.

ಇದಕ್ಕೆ ಮೊದಲು ನಡೆದಿದ್ದ ರಣಜಿ ಪಂದ್ಯದಲ್ಲಿ ಕೆಎಲ್ ರಾಹುಲ್ ವೈಯಕ್ತಿಕ ಕಾರಣ ನೀಡಿ ಗೈರಾಗಿದ್ದರು. ಆದರೆ ಟೀಂ ಇಂಡಿಯಾಗೆ ಮರಳುವ ಮೊದಲು ದೇಶೀಯ ಪಂದ್ಯ ಆಡಲೇಬೇಕು ಎಂದು ನಿಯಮವಿರುವ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Virat Kohli: ರಣಜಿ ಪಂದ್ಯವೋ, ವಿರಾಟ್ ಕೊಹ್ಲಿ ಪ್ರದರ್ಶನ ಪಂದ್ಯವೋ: ದೆಹಲಿ ಮೈದಾನದಲ್ಲಿ ಫ್ಯಾನ್ಸ್ ತಂದ ತಲೆನೋವು (ವಿಡಿಯೋ)