Select Your Language

Notifications

webdunia
webdunia
webdunia
webdunia

Virat Kohli: ರಣಜಿ ಪಂದ್ಯವೋ, ವಿರಾಟ್ ಕೊಹ್ಲಿ ಪ್ರದರ್ಶನ ಪಂದ್ಯವೋ: ದೆಹಲಿ ಮೈದಾನದಲ್ಲಿ ಫ್ಯಾನ್ಸ್ ತಂದ ತಲೆನೋವು (ವಿಡಿಯೋ)

Delhi Ground

Krishnaveni K

ನವದೆಹಲಿ , ಗುರುವಾರ, 30 ಜನವರಿ 2025 (14:24 IST)
Photo Credit: X
ನವದೆಹಲಿ: ಇದೇನು ರಣಜಿ ಪಂದ್ಯವೋ ವಿರಾಟ್ ಕೊಹ್ಲಿ ಪ್ರದರ್ಶನ ಪಂದ್ಯವೋ ಎಂಬ ಅನುಮಾನ ಮೂಡಿಸುವಂತಿದೆ ಇದೀಗ ನಡೆಯತ್ತಿರುವ ದೆಹಲಿ ವರ್ಸಸ್ ರೈಲ್ವೇಸ್ ರಣಜಿ ಪಂದ್ಯ.

ಬರೋಬ್ಬರಿ 13 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಣಜಿ ಪಂದ್ಯವಾಡುತ್ತಿದ್ದಾರೆ. ವಿರಾಟ್ ಕೊಹ್ಲಿಗಿರುವ ಸ್ಟಾರ್ ಗಿರಿ ಏನು ಎಂಬುದಕ್ಕೆ ಈ ಪಂದ್ಯವೇ ಸಾಕ್ಷಿಯಾಗಿದೆ. ಟಾಸ್ ಗೆದ್ದ ದೆಹಲಿ ಮೊದಲು ಫೀಲ್ಡಿಂಗ್ ಮಾಡುತ್ತಿದೆ. ಹಾಗಿದ್ದರೂ ಇಂದು ಸ್ಟೇಡಿಯಂಗೆ ಯಾವುದೋ ಅಂತಾರಾಷ್ಟ್ರೀಯ ಪಂದ್ಯವೇನೋ ಎಂಬಂತೆ ಜನ ಸಾಗರವೇ ಹರಿದುಬಂದಿದೆ.

ಆದರೆ ಇದುವೇ ಪೊಲೀಸರಿಗೆ ತಲೆನೋವಾಗಿದೆ. ರಣಜಿ ಟ್ರೋಫಿ ಪಂದ್ಯವೆಂದು ಅಂತಾರಾಷ್ಟ್ರೀಯ ಪಂದ್ಯದಷ್ಟು ಭದ್ರತೆಯಿಲ್ಲ. ಆದರೆ ಕೊಹ್ಲಿ ಇರುವ ಕಾರಣಕ್ಕೆ ಅಭಿಮಾನಿಗಳು ಸ್ಟೇಡಿಯಂಗೇ ನುಗ್ಗುತ್ತಿದ್ದಾರೆ. ಓರ್ವ ಅಭಿಮಾನಿ ನೇರವಾಗಿ ಪಿಚ್ ಗೇ ನುಗ್ಗಿ ಕೊಹ್ಲಿಯ ಕಾಲಿಗೆ ನಮಸ್ಕರಿಸಲು ಬಂದಿದ್ದಾನೆ. ಈತನನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕಳುಹಿಸಿದ್ದಾರೆ.

ಅಭಿಮಾನಿಗಳು ಎಲ್ಲೆ ಮೀರಿ ಹೋಗುತ್ತಿರುವುದನ್ನು ಕಂಡು ಡಿಡಿಸಿಎ ಅಧಿಕಾರಿಗಳು ಅರೆಸೇನಾ ಪಡೆಯನ್ನು ಮೈದಾನಕ್ಕೆ ಕರೆಸಿಕೊಂಡಿದೆ. ಕೊಹ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಅಭಿಮಾನಿಗಳು ಇನ್ನಷ್ಟು ಸೇರುವ ನಿರೀಕ್ಷೆಯಿದೆ. ಹೀಗಾಗಿ ಇದು ರಣಜಿ ಪಂದ್ಯವೋ, ಕೊಹ್ಲಿ ಪ್ರದರ್ಶನ ಪಂದ್ಯವೋ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೌತಮ್ ಗಂಭೀರ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಜನಪ್ರಿಯತೆ ಕಡಿಮೆಯಾಗಿದೆಯೇ