Select Your Language

Notifications

webdunia
webdunia
webdunia
webdunia

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

Jasprit Bumrah

Krishnaveni K

ಎಜ್ ಬಾಸ್ಟನ್ , ಶುಕ್ರವಾರ, 4 ಜುಲೈ 2025 (16:38 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಿಂದ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಇದರ ನಡುವೆ ಬುಮ್ರಾ ಪೆವಿಲಿಯನ್ ನಲ್ಲಿ ಕುಳಿತಿರುವ ಫೋಟೋ ಒಂದನ್ನು ವೈರಲ್ ಮಾಡಿರುವ ಫ್ಯಾನ್ಸ್ ಇದೇ ಕಾರಣಕ್ಕೆ ಅವರು ಆಡದೇ ಇರುವುದು ಎಂದು ಟ್ರೋಲ್ ಮಾಡಿದ್ದಾರೆ.

ದ್ವಿತೀಯ ಟೆಸ್ಟ್  ಪಂದ್ಯದಿಂದ ಹೊರುಗಳಿದಿದ್ದರೂ ಬುಮ್ರಾ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯದ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಆಕಾಶ್ ದೀಪ್-ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ನಡೆಸುತ್ತಿದೆ. ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದೆ.

ಇದೆಲ್ಲಾ ಅತ್ಲಾಗಿ ಇರಲಿ. ಇಂದು ಬುಮ್ರಾ ಪೆವಿಲಿಯನ್ ನಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸಿಬ್ಬಂದಿಯೊಂದಿಗೆ ಕುಳಿತಿರುವ ಫೋಟೋವೊಂದು ವೈರಲ್ ಆಗಿದೆ. ಬುಮ್ರಾ ಪಕ್ಕದಲ್ಲೇ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಹಿಳಾ ಸಿಬ್ಬಂದಿ ಕುಳಿತು ಬುಮ್ರಾ ಕಡೆಗೆ ನಗು ಮುಖದಲ್ಲೇ ನೋಡುತ್ತಿದ್ದಾರೆ.

ಈ ಫೋಟೋವನ್ನು ನೋಡಿ ನೆಟ್ಟಿಗರು ಅಣ್ಣ ಇದೇ ಕಾರಣಕ್ಕೆ ಆಡಲ್ಲ ಎಂದಿರಬೇಕು ಎಂದು ಕಾಲೆಳೆದಿದ್ದಾರೆ. ಪಕ್ಕದಲ್ಲೇ ಇಷ್ಟು ಸುಂದರ ಯುವತಿ ಕೂತಿದ್ದರೆ ಯಾರಿಗೆ ಆಡಲು ಮನಸ್ಸು ಬರುತ್ತದೆ? ಆದ್ರೂ ಸಂಜನಾ ಬಾಬಿ (ಬುಮ್ರಾ ಪತ್ನಿ) ಜೊತೆ ಹುಷಾರು ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಕ್ರಿಕೆಟಿಗರ ಚಾನೆಲ್ ಭಾರತದಲ್ಲಿ ಒಮ್ಮೆ ಆನ್, ಮತ್ತೆ ಆಫ್