Webdunia - Bharat's app for daily news and videos

Install App

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೇ ಇದೆಂಥಾ ಹೇಳಿಕೆ ಕೊಟ್ರು ಜಸ್ಪ್ರೀತ್ ಬುಮ್ರಾ

Krishnaveni K
ಗುರುವಾರ, 21 ನವೆಂಬರ್ 2024 (15:02 IST)
ಪರ್ತ್: ಟೀಂ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಗೈರಾಗಿರುವ ಬೆನ್ನಲ್ಲೇ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ರೋಹಿತ್ ಶರ್ಮಾ ಪತ್ನಿಯ ಹೆರಿಗೆಯ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗಿದ್ದಾರೆ. ಹೀಗಾಗಿ ಬುಮ್ರಾ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ನಾಯಕರಾಗಲಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಮುನ್ನ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
  
ಈ ವೇಳೆ ಪತ್ರಕರ್ತರೊಬ್ಬರು ಮಧ್ಯಮ ವೇಗಿಯಾಗಿ ತಂಡದ ನಾಯಕರಾಗಿರುವುದಕ್ಕೆ ಏನು ಅನಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಬುಮ್ರಾ ‘ಗೆಳೆಯ ನಾನು 150 ಕೆಎಂಪಿಎಚ್ ವೇಗದಲ್ಲೂ ಚೆಂಡೆಸೆಯಬಲ್ಲೆ. ನಾನು ವೇಗದ ಬೌಲರ್’ ಎಂದು ತಿದ್ದಿದ್ದಾರೆ. ಬಳಿಕ ನನಗೂ ಖಾಯಂ ನಾಯಕನಾಗುವ ಆಸೆಯಿದೆ ಎಂದು ಮನದಾಳ ವ್ಯಕ್ತಪಡಿಸಿದ್ದಾರೆ.

‘ವೇಗದ ಬೌಲರ್ ಗಳು ನಾಯಕರಾಗಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಯಾಕೆಂದರೆ ವೇಗದ ಬೌಲರ್ ಗಳು ಯೋಜನೆಯಲ್ಲಿ ನಿಪುಣರಾಗಿರುತ್ತಾರೆ. ಬೇಕಿದ್ದರೆ ನೀವು ಪ್ಯಾಟ್ ಕುಮಿನ್ಸ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ಹಿಂದೆಯೂ ಅಂತಹ ಸಾಕಷ್ಟು ಉದಾಹರಣೆಗಳಿವೆ. ಭಾರತದ ಪರ ಕಪಿಲ್ ದೇವ್ ಯಶಸ್ವೀ ನಾಯಕರಾಗಿದ್ದರು. ನಾನೂ ಈ ಮೂಲಕ ಹೊಸ ಅಧ್ಯಾಯ ಆರಂಭಿಸಬಹುದು ಎಂದುಕೊಂಡಿದ್ದೇನೆ’ ಎಂದಿದ್ದಾರೆ. ಆ ಮೂಲಕ ತಮಗೂ ಟೆಸ್ಟ್ ತಂಡಕ್ಕೆ ಖಾಯಂ ನಾಯಕನಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶಮಿ ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ನಿವೃತ್ತಿ ಮಾಡಿಸಿದ್ರು: ಗಂಭೀರ್ ವಿರುದ್ಧ ಆರೋಪ ಪಟ್ಟಿ

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

ಮುಂದಿನ ಸುದ್ದಿ
Show comments