ಕೊಲೊಂಬೋ: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಕಾಲಿಟ್ಟ ಇಶಾನ್ ಕಿಶನ್ ನೋಡಿ ನೆಟ್ಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೆನೆಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೂಡಾ ತಮ್ಮ ಆರಂಭದ ದಿನಗಳಲ್ಲಿ ಕ್ಲೀನ್ ಶೇವ್ ಮಾಡಿಕೊಳ್ಳುತ್ತಿದ್ದರು. ಅವರೂ ಮೈದಾನದಲ್ಲಿ ಬ್ಲೂ ಜೆರ್ಸಿ ತೊಟ್ಟು ನಿಂತರೆ ಹೇಗೆ ಕಾಣಿಸುತ್ತಿದ್ದರೋ ಅದೇ ರೀತಿ ಇಶಾನ್ ಕಿಶನ್ ಕೂಡಾ ಕಾಣಿಸಿಕೊಂಡಿದ್ದರು.
ಹೀಗಾಗಿ ನೆಟ್ಟಿಗರು ಇವರು ಕ್ಲೀನ್ ಶೇವ್ಡ್ ವಿರಾಟ್ ಕೊಹ್ಲಿ ಎಂದು ತಮಾಷೆ ಮಾಡಿದ್ದಾರೆ. ಕೇವಲ ನೋಡಲು ಮಾತ್ರವಲ್ಲ, ಬ್ಯಾಟಿಂಗ್ ನಲ್ಲೂ ಕೊಹ್ಲಿಯಂತೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ ಎಂದು ಅಭಿಮಾನಿಗಳು ಯುವ ಕ್ರಿಕೆಟಿಗನನ್ನು ಹೊಗಳಿದ್ದಾರೆ.