ಕೊಲೊಂಬೋ: ರಾಹುಲ್ ದ್ರಾವಿಡ್ ಕ್ರಿಕೆಟಿಗನಾಗಿ, ಅಂಡರ್ 19 ತಂಡದ ಕೋಚ್ ಆಗಿ ಈಗಾಗಲೇ ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ ಟೀಂ ಇಂಡಿಯಾ ಕೋಚ್ ಆಗಿ ಅವರಿಗೆ ಇದು ಪದಾರ್ಪಣೆಯ ಪಂದ್ಯ.
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಅವರು ಕೋಚ್ ಆಗಿ ಅಂಗಣದಲ್ಲಿ ಕಾಣಿಸುತ್ತಿದ್ದಂತೇ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇನ್ನು, ದ್ರಾವಿಡ್ ರ ಕರ್ನಾಟಕ ಸಾಥಿ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದು, ಯುವ ಕ್ರಿಕೆಟಿಗರು ತಮ್ಮ ವೃತ್ತಿ ಜೀವನದ ಆರಂಭದ ಹಂತದಲ್ಲೇ ದ್ರಾವಿಡ್ ಕೈಲಿ ತರಬೇತಿ ಪಡೆಯುತ್ತಿರುವುದು ಅದೃಷ್ಟದ ವಿಚಾರ ಎಂದು ಗೆಳೆಯನಿಗೆ ವೆಂಕಿ ವಿಶ್ ಮಾಡಿದ್ದಾರೆ.