Select Your Language

Notifications

webdunia
webdunia
webdunia
webdunia

ಐಪಿಎಲ್: ಕೊಟ್ಟ ಹಣಕ್ಕೆ ತಕ್ಕ ಆಡದ ಕನ್ನಡಿಗ ಮನೀಶ್ ಪಾಂಡೆ ಹೈದರಾಬಾದ್ ನಿಂದ ಕೊಕ್?!

ಐಪಿಎಲ್: ಕೊಟ್ಟ ಹಣಕ್ಕೆ ತಕ್ಕ ಆಡದ ಕನ್ನಡಿಗ ಮನೀಶ್ ಪಾಂಡೆ ಹೈದರಾಬಾದ್ ನಿಂದ ಕೊಕ್?!
ಹೈದರಾಬಾದ್ , ಶುಕ್ರವಾರ, 16 ನವೆಂಬರ್ 2018 (08:57 IST)
ಹೈದರಾಬಾದ್: ಕಳೆದ ಬಾರಿ ಐಪಿಎಲ್ ನಲ್ಲಿ ಹರಾಜಾದ ಅತೀ ದುಬಾರಿ ಆಟಗಾರರ ಪಟ್ಟಯಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಮನೀಶ್ ಪಾಂಡೆಗೆ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿ ಕೊಕ್ ಕೊಡುವ ಸಾಧ್ಯತೆಯಿದೆ.

ಕಳೆದ ಬಾರಿ 11 ಕೋಟಿ ರೂ. ಗೆ ಹೈದರಾಬಾದ್ ತಂಡ ಮನೀಶ್ ಪಾಂಡೆಯನ್ನು ಖರೀದಿಸಿತ್ತು. ಆದರೆ ಇಡೀ ಟೂರ್ನಮೆಂಟ್ ನಲ್ಲಿ ಪಾಂಡೆ ಕೇವಲ 284 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಂತಿಮ ಹಂತದ ಪಂದ್ಯಗಳಲ್ಲಿ ಕಳಪೆ ಫಾರ್ಮ್ ನಿಂದಾಗಿ ಅವರನ್ನು ಕೈ ಬಿಡಲಾಗಿತ್ತು.

ಹೀಗಾಗಿ ಈ ಬಾರಿಯ ಐಪಿಎಲ್ ಗೆ ಪಾಂಡೆಯನ್ನು ಹೈದರಾಬಾದ್ ತಂಡ ಹರಾಜಿಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಿದೆ. ಕಳೆಪ ಋತುವಿನಲ್ಲಿ ದುಬಾರಿ ಬೆಲೆಗೆ ಹರಾಜಾದ ಆಟಗಾರರ ಪೈಕಿ ಕೆಎಲ್ ರಾಹುಲ್ ಮಾತ್ರ ತಕ್ಕ ಆಟವಾಡಿದ್ದರು. ಹೀಗಾಗಿ ಅವರನ್ನು ಬಿಟ್ಟು ಉಳಿದ ಆಟಗಾರರನ್ನು ಆಯಾ ತಂಡಗಳು ಹರಾಜಿಗೆ ಬಿಡುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆಡಲಿರುವ ಆಸೀಸ್ ಆಟಗಾರರಿಗೆ ಷರತ್ತು ವಿಧಿಸಿದ ಕ್ರಿಕೆಟ್ ಮಂಡಳಿ