Publish Date: Sat, 21 Apr 2018 (09:16 IST)
Updated Date: Sat, 21 Apr 2018 (09:23 IST)
ಪುಣೆ: ಮೊನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕ್ರಿಸ್ ಗೇಲ್ ಮಾಡಿದ ಪರಾಕ್ರಮವನ್ನು ಎಲ್ಲರೂ ಶಹಬಾಶ್ ಎನ್ನುತ್ತಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಪರ ಶೇನ್ ವ್ಯಾಟ್ಸನ್ ಸೂಪರ್ ಆಟವಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ವ್ಯಾಟ್ಸನ್ 57 ಬಾಲ್ ಗಳಲ್ಲಿ 106 ರನ್ ಸಿಡಿಸಿ ತಂಡದ ಮೊತ್ತ ಉಬ್ಬಲು ನೆರವಾದರು. ಅಂತಿಮ ಓವರ್ ವರೆಗೆ ಬ್ಯಾಟಿಂಗ್ ನಡೆಸಿದ ವ್ಯಾಟ್ಸನ್ ಎರಡು ಎಸೆತವಿರುವಾಗ ಔಟಾದರು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ 103 ರನ್ ಸಿಡಿಸಿದ್ದರು. ಅದು ಈ ಕೂಟದ ಮೊದಲ ಶತಕವಾಗಿತ್ತು. ಇಂದು ವ್ಯಾಟ್ಸನ್ ಈ ಐಪಿಎಲ್ ಕೂಟದ ಎರಡನೇ ಶತಕ ದಾಖಲಿಸಿದರು.
ಮತ್ತೆ ಚೇಸಿಂಗ್ ಆರಂಭಿಸಿದ ರಾಜಸ್ಥಾನ್ 18.3 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ 64 ರನ್ ಗಳಿಂದ ಸೋಲನುಭವಿಸಿತು. ಅಂತೂ ಧೋನಿಗೆ ಹಳೆಯ ತವರಿನಲ್ಲಿ ಭರ್ಜರಿ ಗೆಲುವಿನ ಸ್ವಾಗತ ಸಿಕ್ಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.