Publish Date: Sat, 21 Apr 2018 (09:08 IST)
Updated Date: Sat, 21 Apr 2018 (09:09 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ತಮ್ಮದೇ ತಂಡದ ಸಹ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ಎಸೆದ ಎಸೆತವೊಂದು ಗಾಯಕ್ಕೆಡೆ ಮಾಡಿಕೊಟ್ಟಿತು. ಇದಕ್ಕೀಗ ಪಾಂಡ್ಯ ಸಾರಿ ಕೇಳಿದ್ದಾರೆ.
ಪಾಂಡ್ಯ ವಿಕೆಟ್ ಕಡೆಗೆ ಬಾಲ್ ಎಸೆಯುವಾಗ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಬಲ ಕಣ್ಣಿಗೆ ಸಮೀಪದಲ್ಲೇ ಬಾಲ್ ಹಾದು ಹೋಗಿತ್ತು. ಈ ವೇಳೆ ಕಿಶನ್ ಕುಸಿದು ಬಿದ್ದಿದ್ದರು. ಈ ಘಟನೆಗೆ ಟ್ವಿಟರ್ ನಲ್ಲಿ ಭಾರೀ ಪ್ರತಿಕ್ರಿಯೆ ಬಂದಿತ್ತು. ಪಾಂಡ್ಯ ಇದೀಗ ಅಭಿಮಾನಿಗಳ ಮನವಿಗೆ ಕಿವಿಗೊಟ್ಟಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಕಿಶನ್ ಜತೆಗೆ ತೆಗೆಸಿಕೊಂಡಿರುವ ಫೋಟೋ ಪ್ರಕಟಿಸಿರುವ ಹಾರ್ದಿಕ್ ಪಾಂಡ್ಯ ‘ಸಾರಿ ಭಾಯ್.. ಸ್ಟ್ರಾಂಗ್ ಆಗಿ ಇರು’ ಎಂದು ಪಾಂಡ್ಯ ಸಂದೇಶ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.