Publish Date: Fri, 20 Apr 2018 (07:34 IST)
Updated Date: Fri, 20 Apr 2018 (07:35 IST)
ಮೊಹಾಲಿ: ಕೆಎಲ್ ರಾಹುಲ್ ಮೊನ್ನೆಯಷ್ಟೇ ತಮ್ಮ ಐಪಿಎಲ್ ತಂಡದ ಸಹವರ್ತಿ, ವಿಂಡೀಸ್ ದಾಂಡಿಗ ಕ್ರಿಸ್ ಗೇಲ್ ಬಗ್ಗೆ ಭವಿಷ್ಯವಾಣಿ ಹೇಳಿದ್ದರು. ಅದನ್ನು ಇದೀಗ ಗೇಲ್ ಸಮರ್ಥಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ರನ್ ಗಳಿಸಿ ಫಾರ್ಮ್ ಗೆ ಮರಳಿದ್ದ ಕ್ರಿಸ್ ಗೇಲ್ ಆಟ ನೋಡಿ ರಾಹುಲ್, ಗೇಲ್ ಫಾರ್ಮ್ ಗೆ ಮರಳಿರುವುದು ಬೇರೆ ತಂಡಗಳಿಗೆ ಕೆಟ್ಟ ಸುದ್ದಿ ಎಂದು ಸಹವರ್ತಿಯ ಹೊಗಳಿದ್ದರು.
ಅದನ್ನು ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೇಲ್ ಮತ್ತೆ ನಿಜ ಮಾಡಿದ್ದಾರೆ. ಈ ಐಪಿಎಲ್ ಆವೃತ್ತಿಯ ಮೊದಲ ಶತಕ ಗಳಿಸಿದ ಗೇಲ್ ಅಬ್ಬರಕ್ಕೆ 11 ಸಿಕ್ಸರ್ ಗಳೊಂದಿಗೆ 103 ರನ್ ಹರಿದು ಬಂತು. ಕೊನೆಯವರೆಗೂ ಅವರು ನಾಟೌಟ್ ಆಗಿ ಉಳಿದರು. ಇದರಿಂದಾಗಿ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ಅಂತಿಮವಾಗಿ ಈ ಪಂದ್ಯವನ್ನು ಪಂಜಾಬ್ 15 ರನ್ ಗಳಿಂದ ಗೆದ್ದುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.