Publish Date: Fri, 20 Apr 2018 (09:49 IST)
Updated Date: Fri, 20 Apr 2018 (09:50 IST)
ಹೈದರಾಬಾದ್: ಈ ಐಪಿಎಲ್ ಕೂಟ ಆರಂಭವಾಗುವುದಕ್ಕೂ ಮೊದಲೇ ಬಾಲ್ ವಿರೂಪ ಕಳಂಕದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ರನ್ನು ಕಳೆದುಕೊಂಡಿತ್ತು. ಇದೀಗ ಶಿಖರ್ ಧವನ್ ರೂಪದಲ್ಲಿ ಮತ್ತೊಂದು ಆತಂಕ ಎದುರಾಗಿದೆ.
ಟೀಂ ಇಂಡಿಯಾ ಕ್ರಿಕೆಟಿಗ ಗಾಯಗೊಂಡಿದ್ದು, ಹೈದರಾಬಾದ್ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಶಾರ್ಟ್ ಪಿಚ್ ಬಾಲ್ ತಗುಲಿ ಮೊಣಕೈಗೆ ಗಾಯ ಮಾಡಿಕೊಂಡಿರುವ ಧವನ್ ಲಭ್ಯತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಿನ್ನೆ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಧವನ್ ಐದನೇ ಎಸೆತದಲ್ಲೇ ಗಾಯಗೊಂಡು ಪೆವಿಲಿಯನ್ ಗೆ ಮರಳಿದ್ದರು. ನಂತರ ಪೆವಿಲಿಯನ್ ಗೆ ಮರಳಿದ ಧವನ್ ಅಲ್ಲೂ ತಮ್ಮ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಫಿಟ್ ನೆಸ್ ಬಗ್ಗೆ ಹೈದರಾಬಾದ್ ತಂಡ ಆತಂಕದಿಂದ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.