ದುಬೈ: ಐಪಿಎಲ್ 2024 ರ ಹರಾಜು ಪ್ರಕ್ರಿಯೆಗೆ ಕೆಲವೇ ಕ್ಷಣಗಳು ಬಾಕಿಯಿದ್ದು, ಈ ಬಾರಿ ಹರಾಜಿನಲ್ಲಿ ಆರ್ ಸಿಬಿ ಖರೀದಿಸಬಹುದಾದ ಆಟಗಾರರ ಬಗ್ಗೆ ಫ್ರಾಂಚೈಸಿಯೇ ಸುಳಿವು ನೀಡಿದೆ.
ಆರ್ ಸಿಬಿ ಟೀಂ ನೋಡಿದರೆ ಸದ್ಯಕ್ಕೆ ಬ್ಯಾಟಿಂಗ್ ಬಲಾಢ್ಯವಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಫಾ ಡು ಪ್ಲೆಸಿಸ್ ಜೊತೆಗೆ ಈಗ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಕ್ಯಾಮರೂನ್ ಗ್ರೀನ್ ಕೂಡಾ ಸೇರ್ಪಡೆಯಾಗಿದ್ದಾರೆ.
ಆದರೆ ತಂಡ ದುರ್ಬಲವೆನಿಸುತ್ತಿರುವುದು ಬೌಲಿಂಗ್ ವಿಭಾಗದಲ್ಲಿ. ಮೊಹಮ್ಮದ್ ಸಿರಾಜ್ ತಂಡದ ಬೌಲಿಂಗ್ ಶಕ್ತಿ. ಆದರೆ ಅವರಿಗೆ ಬಲ ತುಂಬಲು ಇನ್ನಷ್ಟು ಕೈಗಳು ಬೇಕು. ಹರ್ಷಲ್ ಪಟೇಲ್ ಕೂಡಾ ರಿಲೀಸ್ ಆಗಿದ್ದಾರೆ. ಕಳೆದ ಸೀಸನ್ ನಲ್ಲಿಯೂ ಬೌಲಿಂಗ್ ವಿಭಾಗದಿಂದಾಗಿಯೇ ಸೋತಿತ್ತು.
ಈ ತಪ್ಪು ಮತ್ತೆ ಪುನರಾವರ್ತನೆಯಾಗದೇ ಇರಬೇಕಾದರೆ ತಂಡಕ್ಕೆ ಸಶಕ್ತ ಬೌಲರ್ ಗಳು ಬೇಕು. ಇದೇ ಕಾರಣಕ್ಕೆ ಈ ಬಾರಿ ಮಿನಿ ಹರಾಜಿನಲ್ಲಿ ಬೌಲರ್ ಗಳೇ ಟಾರ್ಗೆಟ್ ಎಂದಿದೆ ಆರ್ ಸಿಬಿ. ತಂಡದಲ್ಲಿ ಖಾಲಿಯಿರುವ ಸ್ಲಾಟ್ ಗಳಿಗೆ ಪ್ರಮುಖವಾಗಿ ಬೌಲರ್ ಗಳಿಗೆ ಆದ್ಯತೆ ನೀಡಲಾಗುತ್ತದೆ.