Publish Date: Thu, 23 Apr 2026 (09:10 IST)
Updated Date: Thu, 23 Apr 2026 (09:13 IST)
ಮುಂಬೈ: ಐಪಿಎಲ್ 2026 ರಲ್ಲಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದ ಸಡಗರ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮುಂದಿನ ಹಂತಕ್ಕೇರುವ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದೆ. ಆದರೆ ಅದಕ್ಕಿಂತ ಹೆಚ್ಚು ಅಭಿಮಾನಿಗಳಿಗೆ ಖುಷಿಗೆ ಕಾರಣವಾಗಿರುವುದು ಧೋನಿ.
ಈ ಬಾರಿ ಇದುವರೆಗೆ ಧೋನಿ ಗಾಯದ ಕಾರಣದಿಂದ ಒಂದೇ ಒಂದು ಪಂದ್ಯವಾಡಲು ಸಾಧ್ಯವಾಗಿರಲಿಲ್ಲ. ಆದರೆ ಅಭಿಮಾನಿಗಳ ಮೆಚ್ಚಿನ ತಲಾ ಫಿಟ್ ಆಗಿದ್ದು ಇಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ. ಧೋನಿ ಕೂಡಾ ಮೊನ್ನೆಯಿಂದಲೇ ಅಭ್ಯಾಸ ಆರಂಭಿಸಿದ್ದಾರೆ. ಸೋಲಿನಿಂದ ಕಂಗೆಟ್ಟಿರುವ ಸಿಎಸ್ ಕೆ ಧೋನಿ ಆಗಮನ ಟಾನಿಕ್ ನೀಡಲಿದೆ. ಇತ್ತ ಅಭಿಮಾನಿಗಳು ಮತ್ತೆ ತಮ್ಮ ತಲಾ ಮೈದಾನದಲ್ಲಿ ಆಡುವುದನ್ನು ನೋಡುವ ಖುಷಿಯಲ್ಲಿದ್ದಾರೆ.
ಇನ್ನು, ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೂ ಇಂದು ಖುಷಿಯ ಸುದ್ದಿಯಿದೆ. ಗಾಯಗೊಂಡು ಕಳೆದ ಎರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಇಂದು ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ. ಅವರೂ ತಂಡಕ್ಕೆ ಬಂದರೆ ಇಂದಿನ ಕಾಳಗ ರಂಗೇರಲಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ