Daily Horoscope

Select Your Language

Notifications

webdunia
webdunia
webdunia
webdunia

IPL 2026: ಮುಂಬೈಗೆ ಶತಕ ಹೊಡೆದು ಟಾನಿಕ್ ನೀಡಿದ ತಿಲಕ್ ವರ್ಮ

Tilak Verma
Photo Credit: X
ಅಹ್ಮದಾಬಾದ್: ಇಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಇಂದಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ತಿಲಕ್ ವರ್ಮ ಭರ್ಜರಿ ಶತಕ ದಾಖಲಿಸಿ ತಂಡಕ್ಕೆ ಟಾನಿಕ್ ನೀಡಿದ್ದಾರೆ.

ರೋಹಿತ್ ಶರ್ಮಾ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಆದರೆ ಟಾಪ್ ಆರ್ಡರ್ ಬ್ಯಾಟಿಗರ ಪೈಕಿ ಸೂರ್ಯಕುಮಾರ್ ಯಾದವ್, ದ್ಯಾನಿಶ್, ಹಾರ್ದಿಕ್ ಪಾಂಡ್ಯ ವೈಫಲ್ಯ ಅನುಭವಿಸಿದರು. ಈ ವೇಳೆ ತಂಡಕ್ಕೆ ಆಧಾರವಾಗಿದ್ದು ನಮನ್ ಧೀರ್ ಮತ್ತು ತಿಲಕ್ ವರ್ಮ.

ನಮನ್ ಧೀರ್ 45 ರನ್ ಗಳಿಸಿ ಔಟಾದರು. ಜೊತೆಗೆ ಕೊನೆಯ ಹಂತದಲ್ಲಿ ಕಗಿಸೊ ರಬಾಡ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. ಹೀಗಾಗಿ ಮುಂಬೈ ದೊಡ್ಡ ಮೊತ್ತ ಪೇರಿಸುವುದು ಕಷ್ಟವೆನಿಸಿತ್ತು. ಈ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿದ್ದು ತಿಲಕ್ ವರ್ಮ.

ಕೇವಲ 45 ಎಸೆತ ಎದುರಿಸಿದ ಅವರು 7 ಸಿಕ್ಸರ್ ಸಹಿತ 101 ರನ್ ಗಳಿಸಿ ಅಜೇಯರಾಗುಳಿದರು. ಇದು ಐಪಿಎಲ್ ನಲ್ಲಿ ತಿಲಕ್ ವರ್ಮ ಅವರ ಚೊಚ್ಚಲ ಶತಕವಾಗಿದೆ. ಇದರಿಂದಾಗಿ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸುವಂತಾಯಿತು. ಇದೀಗ ಗುಜರಾತ್ ಗೆಲ್ಲಲು 200 ರನ್ ಗಳಿಸಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ತಬ್ಕೊಂಡ್ ಬಿಟ್ರು ಕಣ್ಳಾ... ಪ್ರೀತಿ ಜಿಂಟಾ ಅಪ್ಪಿಕೊಂಡಿದ್ದಕ್ಕೆ ಅರ್ಷ್ ದೀಪ್ ಸಿಂಗ್ ರಿಯಾಕ್ಷನ್ Video