Publish Date: Sat, 18 Apr 2026 (08:39 IST)
Updated Date: Sat, 18 Apr 2026 (08:45 IST)
ಬೆಂಗಳೂರು: ಐಪಿಎಲ್ 2026 ರ ಇಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ತವರಿನ ಹುಡುಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಲಿದ್ದಾರೆ.
ಕಳೆದ ಬಾರಿ ಡೆಲ್ಲಿ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಅದ್ಭುತ ಇನಿಂಗ್ಸ್ ಆಡಿದ ಬಳಿಕ ಕೆಎಲ್ ರಾಹುಲ್ ಇದು ನನ್ನ ಮೈದಾನ ಎಂದು ಸೆಲೆಬ್ರೇಷನ್ ಮಾಡಿದ್ದನ್ನು ಅಭಿಮಾನಿಗಳು ಮರೆಯುವಂತಿಲ್ಲ. ಇಂದು ಮತ್ತೊಮ್ಮೆ ಆರ್ ಸಿಬಿ-ಡೆಲ್ಲಿ ಮುಖಾಮುಖಿಯಾಗುತ್ತಿದೆ.
ಕೆಎಲ್ ರಾಹುಲ್ ಡೆಲ್ಲಿ ತಂಡದಲ್ಲಿದ್ದರೂ ಬೆಂಗಳೂರಿನ ಅಭಿಮಾನಿಗಳು ತವರಿನ ತಂಡವನ್ನು ಬಿಟ್ಟುಕೊಡುವುದಿಲ್ಲ. ಈ ಟೂರ್ನಿಯಲ್ಲಿ ಕೇವಲ 1 ಪಂದ್ಯ ಸೋತಿರುವ ಆರ್ ಸಿಬಿ ತವರಿನಲ್ಲಿ ಅಜೇಯವಾಗಿ ಮುಂದುವರಿಯುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ವಿರಾಟ್ ಕೊಹ್ಲಿ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗದೇ ಇದ್ದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿಯಾದರೂ ಆಡುವುದು ಖಚಿತವಾಗಿದೆ.
ವಿಶೇಷವೆಂದರೆ ಇಂದಿನ ಪಂದ್ಯ ಅಪರಾಹ್ನ ನಡೆಯಲಿದೆ. ಇಷ್ಟು ದಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯಗಳು ಸಂಜೆ ನಡೆಯುತ್ತಿತ್ತು. ಆದರೆ ಇಂದಿನ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ