Select Your Language

Notifications

webdunia
webdunia
webdunia
webdunia

ನನ್ನ ತಬ್ಕೊಂಡ್ ಬಿಟ್ರು ಕಣ್ಳಾ... ಪ್ರೀತಿ ಜಿಂಟಾ ಅಪ್ಪಿಕೊಂಡಿದ್ದಕ್ಕೆ ಅರ್ಷ್ ದೀಪ್ ಸಿಂಗ್ ರಿಯಾಕ್ಷನ್ Video

Viral video Arshdeep Singh
Photo Credit: X
ಚಂಢೀಘಡ: ಐಪಿಎಲ್ 2026 ರಲ್ಲಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ರನ್ ಗಳ ಗೆಲುವು ಸಾಧಿಸಿದ ಬಳಿಕ ಪಂಜಾಬ್ ಮಾಲಕಿ ಪ್ರೀತಿ ಜಿಂಟಾ ಬೌಲರ್ ಅರ್ಷ್ ದೀಪ್ ಸಿಂಗ್ ರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅರ್ಷ್ ದೀಪ್ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.

ಪಂಜಾಬ್ ಕಿಂಗ್ಸ್ ಈ ಸೀಸನ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಸತತ ಗೆಲುವಿನಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಖುಷಿ ಮಾಲಕಿ ಪ್ರೀತಿ ಜಿಂಟಾ ಮುಖದಲ್ಲಿ ಎದ್ದು ಕಾಣುತ್ತಿದೆ.

ನಿನ್ನೆಯ ಗೆಲುವಿನ ನಂತರ ಪ್ರೀತಿ ಜಿಂಟಾ ಖುಷಿಯಿಂದ ಮೈದಾನ ತುಂಬಾ ಓಡಾಡಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು. ಇದರ ಜೊತೆಗೆ ಆಟಗಾರರೊಂದಿಗೂ ಖುಷಿಯ ಕ್ಷಣಗಳನ್ನು ಮೈದಾನದಲ್ಲಿ ಕಳೆದಿದ್ದರು.

ಈ ವೇಳೆ ಅರ್ಷ್ ದೀಪ್ ಸಿಂಗ್ ರನ್ನು ತಬ್ಬಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಪ್ರೀತಿ ಜಿಂಟಾ ಬಾಲಿವುಡ್ ನ ಒಂದು ಕಾಲದ ಮೋಸ್ಟ್ ಸುಂದರಿ ಅಭಿನೇತ್ರಿ. ಆಕೆಯ ಜೊತೆ ಒಂದು ಫೋಟೋಗಾಗಿ ಈಗಲೂ ಜನ ಕಾಯುತ್ತಿರುತ್ತಾರೆ. ಹೀಗಿರುವಾಗ ಪ್ರೀತಿ ಜಿಂಟಾ ತಬ್ಬಿಕೊಂಡಿದ್ದು ಅರ್ಷ್ ದೀಪ್ ಖುಷಿ ಹೆಚ್ಚು ಮಾಡಿತ್ತು. ಪ್ರೀತಿ ತಬ್ಬಿಕೊಂಡಿದ್ದಕ್ಕೆ ವಿಕೆಟ್ ಕಿತ್ತಾಗ ಸಂಭ್ರಮಿಸುವಂತೆ ಅರ್ಷ್ ದೀಪ್ ಸಂಭ್ರಮಿಸಿದ್ದಾರೆ. ಅವರ ಈ ಸಂಭ್ರಮದ ವಿಡಿಯೋ ಇಲ್ಲಿದೆ.

pic.twitter.com/7ZPT73X8G3

 

— Rohan???? (@rohann__45) April 20, 2026

Share this Story:

Follow Webdunia kannada

ಮುಂದಿನ ಸುದ್ದಿ

ಅಳುಮುಂಜಿ ವೈಭವ್ ಸೂರ್ಯವಂಶಿ, ಬ್ಯಾಟಿಂಗ್ ನಲ್ಲಿ ಮಾತ್ರ ರಾಕ್ಷಸ Video