Select Your Language

Notifications

webdunia
webdunia
webdunia
webdunia

ಮೈದಾನದಲ್ಲೇ ಸಿಗರೇಟು ಸೇದಿದ ಗುಜರಾತ್ ಬೌಲರ್ ಕಗಿಸೊ ರಬಾಡ: ಏನಿದು ವರ್ತನೆ Video

Kagiso Rabada
ಅಹ್ಮದಾಬಾದ್: ಐಪಿಎಲ್ 2026 ರಲ್ಲಿ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಕಗಿಸೊ ರಬಾಡ ಮೈದಾನದಲ್ಲೇ ಸಿಗರೇಟು ಸೇದಿದ್ದು ತಕ್ಷಣವೇ ಸಹಾಯಕ ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರದರ್ಶನ ಮಾತ್ರವಲ್ಲ, ಮೈದಾನದಲ್ಲಿ ಆಟಗಾರರ ವರ್ತನೆ ಹೇಗಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಕಗಿಸೊ ರಬಾಡ ಗುಜರಾತ್ ಟೈಟನ್ಸ್  ನ ಅದ್ಭುತ ಬೌಲರ್. ಆದರೆ ಅವರು ಮೈದಾನದಲ್ಲಿ ಸಿಗರೇಟು ಸೇದಿ ಶಿಸ್ತು ಉಲ್ಲಂಘಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಮೊನ್ನೆ ಗುಜರಾತ್ ಟೈಟನ್ಸ್ ಸೋಲು ಅನುಭವಿಸಿತ್ತು. ಈ ಸೋಲಿನ ಬಳಿಕ ಪೆವಿಲಿಯನ್ ಗೆ ಹೋಗುವ ಹಾದಿಯಲ್ಲಿ ಕುಳಿತುಕೊಂಡಿದ್ದ ಕಗಿಸೊ ರಬಾಡ ಪುಂಖಾನುಪುಂಖವಾಗಿ ಸಿಗರೇಟು ಸೇದುತ್ತಿದ್ದರು.

ಅವರನ್ನು ಗಮನಿಸಿದ ಸಹಾಯಕ ಸಿಬ್ಬಂದಿಗಳು ಹತ್ತಿರ ಬಂದು ಅವರ ವರ್ತನೆ ಪ್ರಶ್ನೆ ಮಾಡಿದ್ದಾರೆ. ಆದರೂ ಟೆನ್ಷನ್ ನಲ್ಲಿದ್ದಂತೆ ಕಂಡುಬಂದಿದ್ದ ಕಗಿಸೊ ಸಿಗರೇಟು ಸೇದುತ್ತಲೇ ಇದ್ದರು. ಯಾರೋ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಿಬಿಟ್ಟಿದ್ದಾರೆ.


pic.twitter.com/kF65xT8Mxl

 

— lndian Sports Netwrk (@IS_Netwrk29) April 22, 2026

Share this Story:

Follow Webdunia kannada

ಮುಂದಿನ ಸುದ್ದಿ

ಹೊಡೆದ್ಯಲ್ಲೋ ಮಗಾ.. ಅಭಿಷೇಕ್ ಶರ್ಮಾ ಸೆಂಚುರಿಗೆ ಅವರ ತಂದೆಯ ಖುಷಿ ನೋಡಿ Video