ಚಂಢೀಘಡ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಪರ 36 ಎಸೆತಗಳಲ್ಲಿ ಶತಕ ಭಾರಿಸಿ ಗಮನ ಸೆಳೆದ ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ ನಿಜಕ್ಕೂ ಯಾರು ಇಲ್ಲಿದೆ ನೋಡಿ ವಿವರ.
ಪಂಜಾಬ್ ಕಿಂಗ್ಸ್ ನಿನ್ನೆ ಮೊದಲು ಬ್ಯಾಟಿಂಗ್ ಮಾಡಿ ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಕಾರಣವಾಗಿದ್ದು ಪ್ರಿಯಾಂಶ್ ಆರ್ಯ ಬ್ಯಾಟಿಂಗ್. ಒಟ್ಟು 42 ಎಸೆತಗಳಲ್ಲಿ 103 ರನ್ ಗಳಿಸಿ ಪ್ರಿಯಾಂಶ್ ಔಟಾಗಿದ್ದರು. ಈ ಇನಿಂಗ್ಸ್ ನಲ್ಲಿ 9 ಭರ್ಜರಿ ಸಿಕ್ಸರ್, 7 ಬೌಂಡರಿ ಸೇರಿತ್ತು.
ಇನ್ನೂ 24 ರ ಹರೆಯದ ಪ್ರಿಯಾಂಶ್ ಗೆ ಇದು ಮೊದಲ ಐಪಿಎಲ್ ಕೂಟ. ಇದೇ ಐಪಿಎಲ್ ಸೀಸನ್ ನಲ್ಲಿ ಅವರು ಗುಜರಾತ್ ಟೈಟನ್ಸ್ ವಿರುದ್ಧ ಮೊದಲ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಅವರು 23 ಎಸೆತಗಳಲ್ಲಿ 47 ರನ್ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಶತಕ ಸಿಡಿಸಿ ಹೊಸ ಸೆನ್ಸೇಷನಲ್ ಆಟಗಾರನಾಗಿದ್ದಾರೆ.
ಪ್ರಿಯಾಂಶ್ ಆರ್ಯ ಮೂಲತಃ ಉತ್ತರ ಪ್ರದೇಶದವರು. ಆದರೆ ದೆಹಲಿ ಪರ ದೇಶೀಯ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಪ್ರಿಯಾಂಶ್ ಪೋಷಕರು ಶಿಕ್ಷಕರು. ಇದೇ ಕಾರಣಕ್ಕೆ ಅವರ ಬಾಲ್ಯ, ಕ್ರಿಕೆಟ್ ಬದುಕು ಎಲ್ಲವೂ ದೆಹಲಿಯಲ್ಲಿಯೇ ಆಗಿದೆ. ಸಂಜಯ್ ಭಾರದ್ವಾಜ್ ಅವರ ಕೋಚ್.
ಇದಕ್ಕೆ ಮೊದಲು ಡೆಲ್ಲಿ ಪ್ರೀಮಿಯರ್ ಲೀಗ್, ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ಇಂತಹದ್ದೇ ಹೊಡೆಬಡಿಯ ಇನಿಂಗ್ಸ್ ಮೂಲಕ ಗಮನ ಸೆಳೆದಿದ್ದರು. ಅದೇ ಕಾರಣಕ್ಕೆ ಈ ಬಾರಿ ಅವರನ್ನು ಪಂಜಾಬ್ ತಂಡ ಖರೀದಿ ಮಾಡಿತ್ತು. ಇದು ಅವರಿಗೆ ಮೊದಲ ಐಪಿಎಲ್. ಪಂಜಾಬ್ ಪರ ತಮ್ಮ ನ್ಯಾಚುರಲ್ ಶೈಲಿಯ ಅಬ್ಬರದ ಇನಿಂಗ್ಸ್ ಆಟ ಮುಂದುವರಿಸಿರುವ ಪ್ರಿಯಾಂಶ್ ಈಗ ಐಪಿಎಲ್ ನಲ್ಲಿ ಎರಡನೇ ಅತೀ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ.