Webdunia - Bharat's app for daily news and videos

Install App

IPL 2025: ಮುಂದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಹೊಡೀತೀನಿ ಎಂದಿದ್ದ ಇಶಾನ್ ಕಿಶನ್ ಗಳಿಸಿದ್ದು ಸೊನ್ನೆ

Krishnaveni K
ಶುಕ್ರವಾರ, 28 ಮಾರ್ಚ್ 2025 (09:32 IST)
ಹೈದರಾಬಾದ್: ಟೀಂ ಇಂಡಿಯಾದಿಂದ ಕಡೆಗಣಿಲ್ಪಟ್ಟ ಬೇಸರ ಮನದಲ್ಲಿತ್ತು. ಇದೇ ಆಕ್ರೋಶದಲ್ಲೇ ಮೊದಲ ಪಂದ್ಯದಲ್ಲೇ ಸನ್ ರೈಸರ್ಸ್  ಹೈದರಾಬಾದ್ ತಂಡದ ಇಶಾನ್ ಕಿಶನ್ ಅಬ್ಬರದ ಶತಕ ಸಿಡಿಸಿದ್ದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಹೊಡೆಯುತ್ತೇನೆ ಎಂದು ಕೊಚ್ಚಿಕೊಂಡಿದ್ದರು. ಆದರೆ ಈಗ ಗಳಿಸಿದ್ದು ಗೋಲ್ಡನ್ ಡಕ್.

ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಶತಕ ಗಳಿಸಿದಾಗ ಎಷ್ಟೋ ಜನ ಇಂಥಾ ಆಟಗಾರನನ್ನು ತಂಡದಿಂದ ಹೊರಹಾಕಿದ್ದಾರಲ್ಲ ಎಂದು ಬೇಸರಪಟ್ಟುಕೊಂಡಿದ್ದರು. ತಮ್ಮನ್ನು ಟೀಂ ಇಂಡಿಯಾದಿಂದ ಹೊರಗಿಟ್ಟ ಆಕ್ರೋಶ ಇಶಾನ್ ಮುಖದಲ್ಲೂ ಎದ್ದು ಕಾಣುತ್ತಿತ್ತು.

ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಬಳಿಕ ಅವರ ಸಂಭ್ರಮವೂ ಆ ಮಟ್ಟಿಗಿತ್ತು. ಇದಾದ ಬಳಿಕ ಅದೇ ಜೋಶ್ ನಲ್ಲಿ ದ್ವಿಶತಕ ಸಿಡಿಸುತ್ತೇನೆ ಎಂದಿದ್ದರು. ಅವರ ಮಾತು ಕೇಳಿ ಈ ಆಟಗಾರನ ಛಲ ಎಂದು ಎಲ್ಲರೂ ಹೊಗಳಿದ್ದರು.

ಆದರೆ ಈಗ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಒಟ್ಟು 6 ಎಸೆತ ಎದುರಿಸಿದ ಅವರು ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದಾದ ಬಳಿಕ ನೆಟ್ಟಿಗರು ಅವರ ದ್ವಿಶತಕ ಹೇಳಿಕೆಯನ್ನು ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. ಹೇಳಿದಷ್ಟು ಸುಲಭವಲ್ಲ ಮಾಡುವುದು ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments