Publish Date: Fri, 30 May 2025 (13:27 IST)
Updated Date: Fri, 30 May 2025 (13:30 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಫೈನಲ್ ಗೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇದೀಗ ಜೂನ್ 3 ಮಂಗಳವಾರದಂದು ಫೈನಲ್ ನಡೆಯಲಿದ್ದು, ಆಂಜನೇಯನ ವಾರ ಫೈನಲ್ ಗೆಲ್ಲೋದು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್.
ಆರ್ ಸಿಬಿಗೆ ಈ ಬಾರಿ ಆರಂಭದಿಂದಲೂ ಎಲ್ಲವೂ ಶುಭವೇ ಆಗುತ್ತಿದೆ. ವಿರಾಟ್ ಕೊಹ್ಲಿ ಜೆರ್ಸಿ 18, ಐಪಿಎಲ್ ಆವೃತ್ತಿಯೂ 18. ಹೀಗಾಗಿ ಈ ಬಾರಿ ಆರ್ ಸಿಬಿಗೆ ಲಕ್ ಕುದರಲಿದೆ ಎಂದು ಅಭಿಮಾನಿಗಳು ಮೊದಲಿನಿಂದಲೂ ನಂಬಿಕೆಯಿಟ್ಟುಕೊಂಡಿದ್ದಾರೆ.
ಇದೀಗ ಆರ್ ಸಿಬಿ ನಿರೀಕ್ಷೆಯಂತೇ ಫೈನಲ್ ಗೇರಿದೆ. ಅದು ಮಂಗಳವಾರ ಫೈನಲ್ ಪಂದ್ಯ ನಡೆಯಲಿದೆ. ಮಂಗಳವಾರ ಆಂಜನೇಯನಿಗೆ ವಿಶೇಷವಾದ ದಿನ. ಸಾಕಷ್ಟು ಜನ ಆರ್ ಸಿಬಿ ಗೆಲ್ಲಲಿ ಎಂದು ಆಂಜನೇಯನಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ.
ಹೀಗಾಗಿಯೇ ಅಭಿಮಾನಿಗಳು ಆಂಜನೇಯನ ಆಶೀರ್ವಾದದಿಂದ ಆರ್ ಸಿಬಿ ಮಂಗಳವಾರ ಕಪ್ ಎತ್ತಲಿದೆ ಎಂದೇ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಐಪಿಎಲ್ ಈ ಹಿಂದೆಯೂ ಫೈನಲ್ ಗೇರಿದೆ. ಆದರೆ ಆಗೆಲ್ಲಾ ಕಪ್ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಆದರೆ ಈ ಬಾರಿ ಟೂರ್ನಮೆಂಟ್ ನ ಮೊದಲ ಪಂದ್ಯದಿಂದಲೇ ಆರ್ ಸಿಬಿ ತವರಿನ ಪಂದ್ಯಗಳಲ್ಲಿ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ತವರಿನಾಚೆ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನೂ ಮಾಡಿದೆ. ಇದೀಗ ಫೈನಲ್ ಪಂದ್ಯ ಅಹಮ್ಮದಾಬಾದ್ ನಲ್ಲಿ ನಡೆಯಲಿದ್ದು, ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.