Select Your Language

Notifications

webdunia
webdunia
webdunia
webdunia

ಐಪಿಎಲ್ 2024 ಕ್ಕೆ ಇಂದು ಚಾಲನೆ: ಉದ್ಘಾಟನೆಗೆ ಬರುವ ಅತಿಥಿಗಳ ಲಿಸ್ಟ್

IPL 2024

Krishnaveni K

ಚೆನ್ನೈ , ಶುಕ್ರವಾರ, 22 ಮಾರ್ಚ್ 2024 (08:44 IST)
ಚೆನ್ನೈ: ಇಂದಿನಿಂದ ಜಗತ್ತಿನ ಶ್ರೀಮಂತ ಕ್ರೀಡಾಕೂಟ ಐಪಿಎಲ್ 2024 ಕ್ಕೆ ಚಾಲನೆ ಸಿಗಲಿದೆ. ಇಂದಿನ ಉದ್ಘಾಟನಾ ಸಮಾರಂಭ ಮತ್ತು ಪಂದ್ಯ ಚೆನ್ನೈನ ಚಿಪಾಕ್ ಮೈದಾನದಲ್ಲಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಸಿಎಸ್ ಕೆ ಕಳೆದ ಸೀಸನ್ ನ ಚಾಂಪಿಯನ್ ತಂಡವಾಗಿತ್ತು. ಇದೇ ಕಾರಣಕ್ಕೆ ಚೆನ್ನೈ ಅಂಗಳದಲ್ಲೇ ಪಂದ್ಯ ನಡೆಯುತ್ತಿದೆ. ಇಂದು ಸಂಜೆ 6.30 ಕ್ಕೆ ಐಪಿಎಲ್ 2024 ರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಸುಮಾರು ಒಂದು ಗಂಟೆ ಕಾಲ ಉದ್ಘಾಟನಾ ಸಮಾರಂಭದ ಕಾರ್ಯಕ್ರಮಗಳು ನಡೆಯಲಿವೆ. ಅದಾದ ಬಳಿಕ ಆರ್ ಸಿಬಿ-ಸಿಎಸ್ ಕೆ ನಡುವಿನ ಪಂದ್ಯ ನಡೆಯಲಿದೆ. ಈ ಬಾರಿ ಐಪಿಎಲ್ ನ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಈ ಬಾರಿಯ ಉದ್ಘಾಟನಾ ಸಮಾರಂಭಕ್ಕೆ ತಾರೆಯರ ದಂಡೇ ಆಗಮಿಸಲಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ಗಾಯಕ ಸೋನು ನಿಗಂ ಸೇರಿದಂತೆ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿದ ಧೋನಿ: ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್