Select Your Language

Notifications

webdunia
webdunia
webdunia
webdunia

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿದ ಧೋನಿ: ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿದ ಧೋನಿ: ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್

Sampriya

ಬೆಂಗಳೂರು , ಗುರುವಾರ, 21 ಮಾರ್ಚ್ 2024 (16:48 IST)
Photo Courtesy X
ಬೆಂಗಳೂರು:  ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವದಿಂದ  ದಿಗ್ಗಜ ಆಟಗಾರ ಎಂಎಸ್‌ ಧೋನಿ ಅವರು ಹೊರನಡೆದಿದ್ದಾರೆ.

ಅಚ್ಚರಿ ಎಂಬಂತೆ ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ಹೊಣೆ ಹೊತ್ತಿದ್ದಾರೆ. ಈ ಕುರಿತು ಐಪಿಎಲ್‌ ಹಾಗೂ ಸಿಎಸ್‌ಕೆ ಫ್ರಾಂಚೈಸ್ ಖಚಿತಪಡಿಸಿದೆ. ಧೋನಿ ತಮ್ಮ ನಾಯಕತ್ವವನ್ನು ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ ಎಂದು ಫ್ರಾಂಚೈಸ್‌ ಟ್ಟೀಟ್‌ ಮಾಡಿದೆ.

ಇನ್ನೂ ಆಟಗಾರ ರುತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಈ ಅವಧಿಯಲ್ಲಿ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಇದೀಗ ಇವರ ನಾಯಕತ್ವದಲ್ಲಿ 2024ರ ಐಪಿಎಲ್ ಪಂದ್ಯಾಟವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿಸಲಿದೆ.

ಭಾರತ ಕಂಡ ಶ್ರೇಷ್ಠ ನಾಯಕ ಹಾಗೂ ವಿಕೆಟ್‌ ಕೀಪರ್‌ ಆಗಿರುವ ಎಂಎಸ್‌ ಧೋನಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. 42 ವರ್ಷದ ಮಾಹಿ ಪ್ರತಿ ಆವೃತ್ತಿಯಲ್ಲಿಯೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಕೊಹ್ಲಿಗೆ ನನ್ನ ಹೆಸರು ಗೊತ್ತು': ಫೋಟೋ ಹಂಚಿ ಖುಷಿ ವ್ಯಕ್ತಪಡಿಸಿದ ಶ್ರೇಯಾಂಕ ಪಾಟೀಲ