Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಪಂಜಾಬ್ ಹೊರದಬ್ಬಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

Virat Kohli

Krishnaveni K

ಧರ್ಮಶಾಲಾ , ಶುಕ್ರವಾರ, 10 ಮೇ 2024 (08:24 IST)
ಧರ್ಮಶಾಲಾ: ಐಪಿಎಲ್ 2024 ರಲ್ಲಿ ಇನ್ನೇನು ಟೂರ್ನಿಯಿಂದ ಹೊರಬಿದ್ದೇ ಬಿಟ್ಟಿತು ಎನ್ನುವಾಗ ಹಳಿಗೆ ಬಂದ ಆರ್ ಸಿಬಿ ಸತತ ನಾಲ್ಕನೇ ಗೆಲುವಿನ ಮೂಲಕ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿದೆ. ಇನ್ನೊಂದೆಡೆ ಆರ್ ಸಿಬಿ ವಿರುದ್ಧ 60 ರನ್ ಗಳಿಂದ ಸೋತ ಪಂಜಾಬ್‍ ಪ್ಲೇ ಆಫ್ ರೇಸ್ ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ವಿರಾಟ್ ಕೊಹ್ಲಿ ಏಕಾಂಗಿಯಾಗಿ ಅಬ್ಬರಿಸಿದರು. 47 ಎಸೆತ ಎದುರಿಸಿದ ಕೊಹ್ಲಿ 6 ಸಿಕ್ಸರ್ ಗಳೊಂದಿಗೆ 92 ರನ್ ಗಳಿಸಿದರು. ದುರದೃಷ್ಟವಶಾತ್ ಶತಕ ಗಳಿಸುವಲ್ಲಿ ಅವರು ಎಡವಿದರು. ಅವರಿಗೆ ಸಾಥ್ ನೀಡಿದ ರಜತ್ ಪಟೀದಾರ್ 23 ಎಸೆತಗಳಿಂದ 55 ರನ್ ಚಚ್ಚಿದರೆ ಕ್ಯಾಮರೂನ್ ಗ್ರೀನ್ 27 ಎಸೆತಗಳಿಮದ 46 ರನ್ ಸಿಡಿಸಿದರು. ಪಂಜಾಬ್ ಪರ ಹರ್ಷಲ್ ಪಟೇಲ್ 3, ವಿದ್ವತ್ ಕಾವೇರಪ್ಪ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭದಲ್ಲೇ ಪ್ರಭಿಸ್ಮರನ್ ಸಿಂಗ್ ಅವರನ್ನು ಕಳೆದುಕೊಂಡಿತು. ನಂತರ ಬಂದ ರುಸೌ 27 ಎಸೆತಗಳಿಂದ 61 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಶಶಾಂಕ್ ಸಿಂಗ್ 19 ಎಸೆತಗಳಿಂದ 37 ರನ್ ಸಿಡಿಸಿದರು. ಆದರೆ ಇವರಿಬ್ಬರನ್ನು ಬಿಟ್ಟರೆ ತಂಡಕ್ಕೆ ಬೇರೆಯವರಿಂದ ಸಾಥ್ ಸಿಗಲಿಲ್ಲ. ಅಂತಿಮವಾಗಿ ಪಂಜಾಬ್ 17 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟ್ ಆಯಿತು.

ಆರ್ ಸಿಬಿ ಪರ ಮೊಹಮ್ಮದ್ ಸಿರಾಜ್ 3, ಸ್ವಪ್ನಿಲ್ ಸಿಂಗ್, ಲೂಕಿ ಫರ್ಗ್ಯುಸನ್ ಮತ್ತು ಕರಣ್ ಶರ್ಮ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿದೆ. ಆದರೆ ಪಂಜಾಬ್ ಪ್ಲೇ ಆಫ್ ನಿಂದ ಹೊರಬಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ವಾಪಸ್ ಬನ್ನಿ, ಅಲ್ಲಿ ಕತ್ತೆ ಚಾಕರಿ ಮಾಡಿದ್ದು ಸಾಕು: ಕೆಎಲ್ ರಾಹುಲ್ ಗೆ ನೆಟ್ಟಿಗರ ಸಲಹೆ