ಐಪಿಎಲ್ 2024: ಧೋನಿಯನ್ನು ಸ್ವಾರ್ಥಿ ಎಂದ ನೆಟ್ಟಿಗರು

Krishnaveni K
ಗುರುವಾರ, 2 ಮೇ 2024 (11:18 IST)
ಚೆನ್ನೈ: ಧೋನಿ ಗ್ರೇಟೆಸ್ಟ್ ಫಿನಿಶರ್ ಎಂಬ ಹೆಸರು ಮಾಡಿರಬಹುದು. ಆದರೆ ಕೆಲವೊಂದು ಸಾರಿ ಅವರು ಮಾಡುವ ತಪ್ಪುಗಳು ಅಭಿಮಾನಿಗಳಿಗೂ ಇಷ್ಟವಾಗುವುದಿಲ್ಲ. ಅಂತಹದ್ದೇ ಒಂದು ಸಂದರ್ಭಕ್ಕೆ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯ ಸಾಕ್ಷಿಯಾಯಿತು.

 ಈ ಪಂದ್ಯವನ್ನು ಸಿಎಸ್ ಕೆ 7 ವಿಕೆಟ್ ಗಳಿಂದ ಸೋತಿತು. ಸಿಎಸ್ ಕೆ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ವೇಳೆ ಫೈನಲ್ ಓವರ್ ನಲ್ಲಿ ಧೋನಿ ನಡೆದುಕೊಂಡ ರೀತಿ ನೆಟ್ಟಿಗರಿಗೆ ಇಷ್ಟವಾಗಿಲ್ಲ. ತಮ್ಮ ಜೊತೆಗಾರ ಡೆರಿಲ್ ಮಿಚೆಲ್ ಮೇಲೆ ಧೋನಿ ಕೂಗಾಡಿದ್ದು ನೆಟ್ಟಿಗರು ಅವರನ್ನು ಸ್ವಾರ್ಥಿ ಎಂದು ಜರೆದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 11 ಎಸೆತ ಎದುರಿಸಿ 14 ರನ್ ಗಳಿಸಿ  ರನೌಟ್ ಆದರು. ಫೈನಲ್ ಓವರ್ ನಲ್ಲಿ ಧೋನಿ ಕ್ರೀಸ್ ನಲ್ಲಿದ್ದರು. ಎರಡನೇ ಎಸೆತವನ್ನು ಧೋನಿ ಹೊಡೆದ ಬಳಿಕವೂ ರನ್ ಗಾಗಿ ಓಡಲಿಲ್ಲ. ಆದರೆ ಸಹ ಆಟಗಾರ ಡೆರಿಲ್ ಮಿಚೆಲ್ ಓಡಲು ಬಯಸಿದ್ದರು. ಬಹುಶಃ ಧೋನಿ ಓಡಿದ್ದರೆ ತಂಡಕ್ಕಾಗಿ ಎರಡು ರನ್ ಒಟ್ಟುಗೂಡಿಸಬಹುದಿತ್ತು. ಆದರೆ ರಿಪ್ಲೇನಲ್ಲಿ ಧೋನಿ ಓಡಲು ನಿರಾಕರಿಸಿದ್ದು ಮಾತ್ರವಲ್ಲ ಮಿಚೆಲ್ ವಿರುದ್ಧ ಕೂಗಾಡಿದ್ದು ಸ್ಪಷ್ಟವಾಗಿತ್ತು.

ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಸಹ ಆಟಗಾರನ ಸಾಮರ್ಥ್ಯದ ಮೇಲೆ ಧೋನಿಗೆ ನಂಬಿಕೆಯಿಲ್ಲ. ಅವರೊಬ್ಬ ಸ್ವಾರ್ಥಿಯಂತೆ ವರ್ತಿಸಿದರು ಎಂದು ಜರೆದಿದ್ದಾರೆ. ಮುಂದಿನ ಎಸೆತವನ್ನು ಧೋನಿ ಒಂದು ಬೌಂಡರಿ, ಒಂದು ಸಿಕ್ಸರ್ ಗಟ್ಟಿದರು. ಹಾಗಿದ್ದರೂ ಡೆರಿಲ್ ಮಿಚೆಲ್ ಜೊತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಫೇರ್

ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

ಮಾಜಿ ಪತ್ನಿ ಧನಶ್ರೀ ವಿರುದ್ಧ ಮತ್ತೆ ಯಜುವೇಂದ್ರ ಚಾಹಲ್‌ ಗರಂ: ಮೋಸದ ಆರೋಪಕ್ಕೆ ತಿರುಗೇಟು

ICC Men's Test Player Rankings: ನಂಬರ್ ಒನ್ ಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ

Viral video: ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಬ್ಯಾಟ್ ನಿಂದ ಹೊಡೆಯಲು ಹೋದ ಪೃಥ್ವಿ ಶಾ

ಮುಂದಿನ ಸುದ್ದಿ
Show comments