Webdunia - Bharat's app for daily news and videos

Install App

ಐಪಿಎಲ್ 2024: ಮುಂಬೈ ಇಂಡಿಯನ್ಸ್ ಗೆ ಶಾಕ್ ಕೊಟ್ಟ ಸೂರ್ಯಕುಮಾರ್ ಯಾದವ್

Krishnaveni K
ಮಂಗಳವಾರ, 12 ಮಾರ್ಚ್ 2024 (11:41 IST)
Photo Courtesy: Twitter
ಮುಂಬೈ: ಐಪಿಎಲ್ 2024 ಆರಂಭಕ್ಕೆ ಕೆಲವೇ ಕ್ಷಣಗಳ ಮೊದಲು ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಶಾಕ್ ಕೊಟ್ಟಿದ್ದಾರೆ. ಆರಂಭದ ಎರಡು ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ.

ಸೂರ್ಯಕುಮಾರ್ ಯಾದವ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರಷ್ಟೇ. ಇತ್ತೀಚೆಗಷ್ಟೇ ಅವರಿಗೆ ಹರ್ನಿಯಾಗೆ ಶಸ್ತ್ರಚಿಕಿತ್ಸೆಯಾಗಿತ್ತು. ಇದಾದ ಬಳಿಕ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಿಗದೇ ಐಪಿಎಲ್ ನಲ್ಲಿ ಪಾಲ್ಗೊಳ್ಳಲು ಸಾಧ‍್ಯವಾಗುವುದಿಲ್ಲ.

ಸದ್ಯಕ್ಕೆ ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಮೊದಲ ಎರಡು ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಮಾರ್ಚ್ 24 ರಂದು ಅಹಮ್ಮದಾಬಾದ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಪಂದ್ಯವಿದೆ. ಇದಾದ ಬಳಿಕ ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವಿದೆ. ಈ ಎರಡೂ ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಲಭ್ಯರಿರುವುದಿಲ್ಲ.

ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ಕೊಟ್ಟ ಮೇಲೆ ಬೇಸರಿಸಿಕೊಂಡವರಲ್ಲಿ ಸೂರ್ಯಕುಮಾರ್ ಯಾದವ್ ಕೂಡಾ ಒಬ್ಬರು. ಇದೀಗ ಸೂರ್ಯಕುಮಾರ್ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಈಗಾಗಲೇ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ‍ಕ್ಯಾಂಪ್ ಗೆ ಬಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಪಾಕಿಸ್ತಾನ ಕ್ರಿಕೆಟಿಗರ ಚಾನೆಲ್ ಭಾರತದಲ್ಲಿ ಒಮ್ಮೆ ಆನ್, ಮತ್ತೆ ಆಫ್

ಮುಂದಿನ ಸುದ್ದಿ
Show comments