Webdunia - Bharat's app for daily news and videos

Install App

ಡಬ್ಲ್ಯುಪಿಎಲ್ 2024: ಆರ್ ಸಿಬಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

Krishnaveni K
ಮಂಗಳವಾರ, 12 ಮಾರ್ಚ್ 2024 (10:34 IST)
ದೆಹಲಿ: ಡಬ್ಲ್ಯುಪಿಎಲ್ ಕೂಟದಲ್ಲಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಕ್ಷಣದಲ್ಲಿ ಸೋತಿದ್ದ ಆರ್ ಸಿಬಿಗೆ ಇಂದು ಮತ್ತೊಂದು ಪ್ರಬಲ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದ್ದರೆ ಆರ್ ಸಿಬಿಗೆ ಪ್ಲೇ ಆಫ್ ಅವಕಾಶ ಗಟ್ಟಿಯಾಗುತ್ತಿತ್ತು. ಆದರೆ ಕಳೆದ ಪಂದ್ಯವನ್ನು 1 ರನ್ ನಿಂದ ಸೋತ ಆರ್ ಸಿಬಿ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಕಳೆದ ಪಂದ್ಯದ ಸೋಲಿನ ಹತಾಶೆಯಿಂದ ಮೇಲೆದ್ದು ಇಂದು ಆರ್ ಸಿಬಿ ಹೊಸ ಹುರುಪಿನಿಂದ ಆಡಬೇಕಿದೆ.

ಅತ್ತ ಮುಂಬೈ ಇಂಡಿಯನ್ಸ್ ತಂಡ ಸುಲಭದ ಎದುರಾಳಿಯಲ್ಲ. ಇದುವರೆಗೆ ಆರ್ ಸಿಬಿಗೆ ಮುಂಬೈ ತಂಡವನ್ನು ಸೋಲಿಸಲು ಸಾಧ‍್ಯವಾಗಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ನೋಡಿದರೆ ಎದುರಾಳಿಗಳಿಗೆ ನಡುಕ ಬರೋದು ಗ್ಯಾರಂಟಿ. ಅವರು ಸಿಡಿದು ನಿಂತರೆ ಯಾವ ಬೌಲರ್ ನ ಯೋಜನೆಯೂ ತಲೆಕೆಳಗು ಮಾಡಬಲ್ಲರು.

ಆದರೆ ಆರ್ ಸಿಬಿಗೆ ದೊಡ್ಡ ಪ್ಲಸ್ ಪಾಯಿಂಟ್ ಎಲ್ಸಿ ಪೆರಿ, ರಿಚಾ ಘೋಷ್ ಫಾರ್ಮ್. ಆದರೆ ನಾಯಕಿ ಸ್ಮೃತಿ ಮಂಧಾನ ಅಗತ್ಯ ಬಂದಾಗ ಕೈ ಕೊಡುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಕಳೆದ ಪಂದ್ಯದಲ್ಲೂ ಸ್ಮೃತಿ ಉತ್ತಮ ಆರಂಭ ನೀಡಿದ್ದರೆ ಸೋಲುತ್ತಿರಲಿಲ್ಲ. ಮುಂಬೈ ವಿರುದ್ಧ ಗೆಲ್ಲಲು ಆರ್ ಸಿಬಿ ಎಲ್ಲಾ ಕೊರತೆಗಳನ್ನು ನೀಗಿಸಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

ಮುಂದಿನ ಸುದ್ದಿ
Show comments