Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಮೇ 18 ವಿರಾಟ್ ಕೊಹ್ಲಿಗೂ ಲಕ್ಕಿ ದಿನ, ಇಲ್ಲಿದೆ ಡೀಟೈಲ್ಸ್

Virat Kohli

Krishnaveni K

ಬೆಂಗಳೂರು , ಶುಕ್ರವಾರ, 17 ಮೇ 2024 (13:31 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ನಾಳೆ ನಡೆಯಲಿರುವ ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಪಂದ್ಯದ ಮೇಲೆ ಎಲ್ಲರ ದೃಷ್ಟಿಯಿದೆ. ಈ ಪಂದ್ಯವನ್ನು ಆರ್ ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ವಿಶೇಷವೆಂದರೆ ಈ ದಿನ ವಿರಾಟ್ ಕೊಹ್ಲಿಗೂ ಅದೃಷ್ಟದ ದಿನ. ಹೇಗೆ ಅಂತೀರಾ? ಇಲ್ಲಿದೆ ಲೆಕ್ಕಾಚಾರ.

ಮೇ 18 ರಂದು ಪಂದ್ಯ ನಡೆಯುತ್ತಿದೆ. 18 ರಂದು ಪಂದ್ಯ ನಡೆದಾಗ ಆರ್ ಸಿಬಿ ಒಮ್ಮೆಯೂ ಪಂದ್ಯ ಸೋತಿಲ್ಲ. ವಿಶೇಷವೆಂದರೆ ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ ಕೂಡಾ 18. ಈ ದಿನ ವಿರಾಟ್ ಕೊಹ್ಲಿಗೆ ಇನ್ನೂ ಒಂದು ಲೆಕ್ಕಾಚಾರದಲ್ಲಿ ಅದೃಷ್ಟದಾಯಕ ದಿನವಾಗಿದೆ.

ಐಪಿಎಲ್ ಇತಿಹಾಸದಲ್ಲಿ ಮೇ 18 ವಿರಾಟ್ ಕೊಹ್ಲಿ ಸ್ಮರಣೀಯ ದಿನವಾಗಿದೆ. ಇದೇ ದಿನ ಐಪಿಎಲ್ ಪಂದ್ಯ ನಡೆದಾಗಲೆಲ್ಲಾ ಆರ್ ಸಿಬಿ ಗೆದ್ದಿರುವುದು ಮಾತ್ರವಲ್ಲ, ವಿರಾಟ್ ಕೊಹ್ಲಿ ಕೂಡಾ ಎರಡು ಬಾರಿ ಶತಕ, ಇನ್ನೊಂದು ಬಾರಿ ಅರ್ಧಶತಕ ಸಿಡಿಸಿದ್ದಾರೆ. ಆದರೆ ಒಮ್ಮೆಯೂ ಈ ದಿನ ಅವರ ಸ್ಕೋರ್ 20 ಕ್ಕಿಂತ ಕೆಳಗಿಳಿದಿಲ್ಲ.

2013 ರಲ್ಲಿ ಸಿಎಸ್ ಕೆ ವಿರುದ್ಧ ಆರ್ ಸಿಬಿ ಇದೇ ದಿನ ಗೆದ್ದಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ಎಸೆತಗಳಿಂದ ಅಜೇಯ 56 ರನ್ ಸಿಡಿಸಿದ್ದಾರೆ. 2014 ರಲ್ಲಿ ಇದೇ ದಿನ ಪಂದ್ಯ ನಡೆದಾಗ ಮತ್ತೆ ಸಿಎಸ್ ಕೆ ವಿರುದ್ಧ ಆರ್ ಸಿಬಿ ಗೆದ್ದಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ಎಸೆತಗಳಿಂದ 27 ರನ್ ಗಳಿಸಿದ್ದರು. 2016 ರಲ್ಲಿ ಕೆಕೆಆರ್ ವಿರುದ್ಧ ಇದೇ ದಿನ ಪಂದ್ಯ ನಡೆದಾಗ ಕೊಹ್ಲಿ ಶತಕ ಸಿಡಿಸಿದ್ದರು. ಕೇವಲ 50 ಎಸೆತಗಳಿಂದ ಕೊಹ್ಲಿ 113 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು. 2023 ರಲ್ಲಿ ಹೈದರಾಬಾದ್‍ ವಿರುದ್ಧ ಇದೇ ದಿನ ಪಂದ್ಯ ಗೆದ್ದಾಗ ಕೊಹ್ಲಿ ಮತ್ತೊಮ್ಮೆ ಶತಕ ಸಿಡಿಸಿದರು. ಆ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಿಂದ 100 ರನ್ ಗಳಿಸಿದರು.

ಪ್ರತೀ ಬಾರಿ ಈ ದಿನ ಪಂದ್ಯ ನಡೆದಾಗಲೆಲ್ಲಾ ಆರ್ ಸಿಬಿ ಗೆಲುವನ್ನೇ ಕಾಣುತ್ತಾ ಬಂದಿದೆ. ಜೊತೆಗೆ ಕೊಹ್ಲಿ ಕೂಡಾ ಈ ದಿನ ಭರ್ಜರಿ ರನ್ ಗಳಿಸಿದ್ದಾರೆ. ಇದೀಗ ಮೂರನೇ ಬಾರಿ ಇದೇ ದಿನಾಂಕಕ್ಕೆ ಸಿಎಸ್ ಕೆ ವಿರುದ್ಧ ಆರ್ ಸಿಬಿ ಪಂದ್ಯವಾಡುತ್ತಿದೆ. ಈ ಬಾರಿಯೂ ಹಳೆಯ ಫಲಿತಾಂಶಗಳೇ ಪುನರಾವರ್ತನೆಯಾಗಲಿ ಎಂಬುದು ಎಲ್ಲರ ಬಯಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಮಿಕಾ ಬಗ್ಗೆ ದೊಡ್ಡ ಸೀಕ್ರೆಟ್ ಬಯಲು ಮಾಡಿದ ವಿರಾಟ್ ಕೊಹ್ಲಿ