Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಆರ್ ಸಿಬಿ ಡ್ರೆಸ್ಸಿಂಗ್ ರೂಂಗೆ ಬಂದು ಚಹಾ ಕೇಳಿದ ಧೋನಿ

Dhoni

Krishnaveni K

ಬೆಂಗಳೂರು , ಶುಕ್ರವಾರ, 17 ಮೇ 2024 (10:29 IST)
Photo Courtesy: Instagram
ಬೆಂಗಳೂರು: ಐಪಿಎಲ್ 2024 ನಾಳೆ ನಡೆಯಲಿರುವ ಆರ್ ಸಿಬಿ ವರ್ಸಸ್ ಸಿಎಸ್ ಕೆ ನಡುವಿನ ಪಂದ್ಯಕ್ಕೆ ಮುನ್ನ ಸಿಎಸ್ ಕೆ ಮಾಜಿ ನಾಯಕ ಎಂಎಸ್ ಧೋನಿ ಎದುರಾಳಿಗಳ ಡ್ರೆಸ್ಸಿಂಗ್ ರೂಂಗೆ ಬಂದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವಿಡಿಯೋವನ್ನು ಪ್ರಕಟಿಸಿದೆ. ಆರ್ ಸಿಬಿ ಡ್ರೆಸ್ಸಿಂಗ್ ರೂಂಗೆ ಅಚಾನಕ್ ಆಗಿ ಬಂದು ಸರ್ಪೈಸ್ ಕೊಟ್ಟ ಧೋನಿ ಒಂದು ಲೋಟ ಹಿಡಿದು ಚಹಾ ನೀಡುವಂತೆ ಆರ್ ಸಿಬಿ ಸಹಾಯಕ ಸಿಬ್ಬಂದಿಗಳಿಗೆ ಕೇಳಿಕೊಳ್ಳುತ್ತಾರೆ. ಬಳಿಕ ಚಹಾ ಪಡೆದು ಅಲ್ಲಿಂದ ತೆರಳಿದ್ದಾರೆ. ಧೋನಿಯ ಚಹಾ ಪ್ರೀತಿಗೆ ಇದುವೇ ಸಾಕ್ಷಿ.

ಧೋನಿ ಈ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಹತ್ವದ ಪಂದ್ಯಕ್ಕೆ ಮುನ್ನ ಉಭಯ ತಂಡಗಳ ನಡುವೆ ಕಾವೇರಿದ ವಾತಾವರಣವಿರಬೇಕಾದರೆ ಧೋನಿ ಎಷ್ಟು ಕೂಲ್ ಆಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದಕ್ಕೇ ಧೋನಿ ಯಾವತ್ತೂ ಸ್ಪೆಷಲ್ ಎನಿಸುವುದು. ಈ ವಿಡಿಯೋ ಜೊತೆಗೆ ಆರ್ ಸಿಬಿ, ಮಹಿ ಬೆಂಗಳೂರಿಗೆ ಸ್ವಾಗತ ಎಂದು ಸಾಲು ಬರೆದುಕೊಂಡಿದೆ.

ಧೋನಿಗೆ ಬೆಂಗಳೂರಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ನಾಳೆ ಮೈದಾನದಲ್ಲಿ ಧೋನಿ ಮತ್ತು  ವಿರಾಟ್ ಕೊಹ್ಲಿ ಎಂಬ ದಿಗ್ಗಜ ಆಟಗಾರರಿಬ್ಬರು ಮುಖಾಮುಖಿಯಾಗುವುದನ್ನು ನೋಡಲು ಜನ ಕಾದು ನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್ ಗೆ ಇಂದು ಕೊನೆಯ ಪಂದ್ಯ