Select Your Language

Notifications

webdunia
webdunia
webdunia
Sunday, 6 April 2025
webdunia

ಪೆವಿಲಿಯನ್ ನಲ್ಲಿ ಕೂತು ರಾಹುಲ್ ಗಾಂಧಿ ಪ್ರೆಸ್ ಕಾನ್ಫರೆನ್ಸ್ ವೀಕ್ಷಿಸಿದರಾ ವಿರಾಟ್ ಕೊಹ್ಲಿ

Virat Kohli

Krishnaveni K

ಚೆನ್ನೈ , ಶನಿವಾರ, 23 ಮಾರ್ಚ್ 2024 (10:17 IST)
Photo Courtesy: Twitter
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದ ನಡುವೆ ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೆಸ್ ಕಾನ್ಫರೆನ್ಸ್ ವಿಡಿಯೋ ವೀಕ್ಷಿಸುತ್ತಿದ್ದರಾ? ಹೀಗೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಪೆವಿಲಿಯನ್ ನಲ್ಲಿ ಕುಳಿತು ತಮ್ಮ ಮೊಬೈಲ್ ವೀಕ್ಷಿಸುತ್ತಿದ್ದು, ಇದರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಿದ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಾಧ‍್ಯಮಗೋಷ್ಠಿಯ ವಿಡಿಯೋ ಪ್ಲೇ ಆಗುತ್ತಿದೆ. ಇದನ್ನು ನೋಡಿ ಎಷ್ಟೋ ಮಂದಿ ವಿರಾಟ್ ಕೊಹ್ಲಿ ಕೂಡಾ ರಾಹುಲ್ ಗಾಂಧಿ ವಿಡಿಯೋ ನೋಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.

ಆದರೆ ಇದೊಂದು ಫೇಜ್ ವಿಡಿಯೋ ಎನ್ನಲಾಗಿದೆ. ವಿರಾಟ್ ಕೊಹ್ಲಿ ಮೊಬೈಲ್ ವೀಕ್ಷಿಸುತ್ತಿರುವುದಕ್ಕೆ ರಾಹುಲ್ ಗಾಂಧಿ ಫೋಟೋ ಎಡಿಟ್ ಮಾಡಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಸಿಎಸ್ ಕೆ ವಿರುದ್ಧದ ಪಂದ್ಯದ ಬ್ಯುಸಿ ನಡುವೆ ಕೊಹ್ಲಿ ರಾಜಕೀಯ  ವಿಚಾರದ ಬಗ್ಗೆ ತಲೆ ಹಾಕಲ್ಲ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

ಈ ಹಿಂದೆಯೂ ಒಮ್ಮೆ ರಾಹುಲ್ ಗಾಂಧಿ ಪರವಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದಾರೆಂದು ಫೇಕ್ ನ್ಯೂಸ್ ಒಂದು ಹರಿದಾಡಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಫೋಟೋ ಓಡಾಡುತ್ತಿದೆ. ಇದೂ ಕೂಡಾ ಫೇಕ್ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರಚಿನ್ ರವೀಂದ್ರಗೆ ಮಧ್ಯಗಬೆರಳು ತೋರಿಸಿ ವಿರಾಟ್ ಕೊಹ್ಲಿ ಅಸಭ್ಯ ವರ್ತನೆ